ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಆಚರಣೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈಗಾಗಲೇ ದೇಗುಲದ ಸುತ್ತಮುತ್ತ ವಿದ್ಯುತ್ ದೀಪಗಳು ಝಗಮಗಿಸುತ್ತಿದೆ.
ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಹೂವಿನ ದಂಡೆಯನ್ನ ಹೊತ್ತು ಸಾಗುವ ವಿಶ್ವವಿಖ್ಯಾತ ಕರಗ ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.
ಏಪ್ರಿಲ್ 1 ರ ಚೈತ್ರ ಪೌರ್ಣಮಿಯ ದಿನ ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿಯೂ ಎ. ಜ್ಞಾನೇಂದ್ರ, ಕರಗ ಹೊರಲಿದ್ದಾರೆ. ಈ ಬಾರಿಯ ಕರಗ ಉತ್ಸವವು ಹಲವು ವಿಶೇಷತೆಗಳಿಂದ ಕೂಡಿದ್ದು, ಮೈಸೂರು ದಸರಾದಂತೆ ಕರಗದಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ.
ಧರ್ಮರಾಯ ದೇಗುಲದ ಬೀದಿಗಳು, ಜೆಸಿರಸ್ತೆ, ಕಾರ್ಪೋರೇಷನ್ ರಸ್ತೆ, ಜಿಬಿಎ ಕಚೇರಿ ರಸ್ತೆ, ಎಸ್ಪಿ ರಸ್ತೆ, ಅವೆನ್ಯೂ ರೋಡ್, ಕೆ.ಆರ್. ಮಾರ್ಕೆಟ್ ಇನ್ನಿತರ ರಸ್ತೆಗಳಲ್ಲಿ ದೀಪಾಲಂಕಾರ ಹಬ್ಬದ ಕಳೆ ತಂದಿದೆ.



