March 30, 2026
Monday, March 30, 2026
spot_img

ಕುಡಿಯೋದು ನಿಲ್ಲಿಸಿ ಎಂದಿದ್ದಕ್ಕೆ ಪತ್ನಿಗೇ ಚಟ್ಟ ಕಟ್ಟಿದ ಪತಿ? ಮಗು ಅನಾಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಡಿಯುವ ಚಟ ಮನೆಯನ್ನು ಹಾಳು ಮಾಡುತ್ತದೆ. ದಯವಿಟ್ಟು ಕುಡಿತ ನಿಲ್ಲಿಸಿ ಎಂದ ಪತ್ನಿಯ ಮೃತದೇಹ ಕೆಲವೇ ಸಮಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಾಯಚೂರಿನಲ್ಲಿ ಕಳೆದ ಎರದು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್​ ವಿವಾಹವಾಗಿದೆ. ದಂಪತಿಗೆ 11 ತಿಂಗಳ ಮಗು ಕೂಡ ಇದೆ. ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕಾರ್ಯನಿರ್ವಹಿಸುತ್ತಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು. 30 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನ ವಿದ್ಯಾ ಕುಟುಂಬ ವರದಕ್ಷಿಣೆಯಾಗಿ ನೀಡಿದ್ದರು.

ಕೆಲಸಕ್ಕೆ ಹೋಗಿದ್ದ ವಿದ್ಯಾರನ್ನು ಮನೆಗೆ ಕರೆಸಿಕೊಂಡ ಮಂಜುನಾಥ್‌ ಕಂಠಪೂರ್ತಿ ಕುಡಿದು ಜಗಳ ಆಡಿದ್ದಾನೆ. ಇದೇ ವೇಳೆ ಗಂಡನ ಕುಡಿತದ ಬಗ್ಗೆ ಅತ್ತೆಗೆ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಕೆಲಹೊತ್ತಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾ ಮೃತದೇಹ ಪತ್ತೆ ಆಗಿದೆ. ಗಂಡ ಮತ್ತು ಅತ್ತೆಯೇ ನೇಣುಬಿಗಿದು ಕೊಲೆಗೈದಿರುವುದಾಗಿ ಆರೋಪ ಕೇಳಿಬಂದಿದೆ.

ಸದ್ಯ ಮಂಜುನಾಥ್ ಮತ್ತು ಕವಿತಾ ವಿರುದ್ಧ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !