March 30, 2026
Monday, March 30, 2026
spot_img

ರಾಜ್ಯ ಸಾರಿಗೆ ಇಲಾಖೆಗೂ ತಟ್ಟಿದ ಯುದ್ಧದ ಬಿಸಿ: ಬಸ್ ಗಳಿಗೆ ಎದುರಾಗಲಿದೆಯೇ ಇಂಧನ ಕೊರತೆ ಭೀತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಬಿಸಿ ರಾಜ್ಯ ಸಾರಿಗೆ ಇಲಾಖೆಗೂ ತಟ್ಟಿದ್ದು, ಯುದ್ಧ ಮುಂದುವರಿದರೆ ಸಾರಿಗೆ ನಿಗಮಗಳಿಗೆ ಡೀಸೆಲ್ ಕೊರತೆ ಎದುರಾಗಬಹುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆದರೆ ಯುದ್ಧ ಮುಂದುವರಿದಲ್ಲಿ ಕಚ್ಚಾ ತೈಲದ ಆಮದು ಕಡಿಮೆಯಾಗಿ ಡೀಸೆಲ್ ಲಭ್ಯತೆ ಕಡಿಯೆಯಾಗಬಹುದು.ಇದರಿಂದ ರಾಜ್ಯ ಸಹಿತ ಇಡೀ ದೇಶದ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !