July 28, 2026
Tuesday, July 28, 2026
spot_img

ಪತಿಗೆ ಬ್ಲಾಕ್‌ಮೇಲ್‌ ಮಾಡಲು ತನ್ನದೇ ಅಶ್ಲೀಲ ವಿಡಿಯೋ ಹರಿಬಿಟ್ಟ ಪತ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪತಿ ಮೇಲಿನ ಸಿಟ್ಟಿಗೆ, ಆತನನ್ನು ಬ್ಲಾಕ್‌ಮೇಲ್‌ ಮಾಡುವ ಸಲುವಾಗಿ ಪತ್ನಿಯೇ ತನ್ನ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೆಟ್ಟ ವಿಡಿಯೋಗಳನ್ನು ಹರಿಬಿಟ್ಟ ಘಟನೆ ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ. ಸ್ನಾನ ಮಾಡುವ ವಿಡಿಯೋ ಅಪ್‌ಲೋಡ್‌ ಮಾಡಿ, ಇದನ್ನು ಪತಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ ಎಂದು ಪೊಲೀಸ್‌ ಕಂಪ್ಲೆಂಟ್‌ ನೀಡಿದ್ದಾಳೆ.

ವಿಚಾರಣೆ ವೇಳೆ ನಿಜಾಂಶ ಹೊರಗೆ ಬಂದಿದೆ. ಮಹಿಳೆಯೇ ವಿಡಿಯೋ ಮಾಡಿ ಪತಿಯ ಮೇಲೆ ಆರೋಪ ಹೊರಿಸಿದ್ದಾಳೆ ಎಂದು ತಿಳಿದುಬಂದಿದೆ.

ಸೈಬರ್ ಭದ್ರತಾ ತಂಡ ಮಹಿಳೆಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ, ಆಕೆಯ ಪ್ರಿಯತಮ ಆಕೆಗೆ ಮೊಬೈಲ್ ಸಿಮ್ ಕಾರ್ಡ್ ನೀಡಿ ನಕಲಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ಸೃಷ್ಟಿಸಿ, ಅದರಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವುದು ಪತ್ತೆಯಾಗಿದೆ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಹೆಚ್ಚಿನ ವಿವರ ಹೊರಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !