June 6, 2026
Saturday, June 6, 2026
spot_img

DAILY MOTIVATION | ಜೀವನದಲ್ಲಿ ಏನೇ ಆಗಲಿ ಈ ಮೂರು ವಿಷಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ

ಜೀವನದಲ್ಲಿ ಕೆಲವೊಮ್ಮೆ ಯಾವ ವಿಷಯಗಳಿಗೆ ಗಮನ ಕೊಡಬೇಕು, ಯಾವ ವಿಷಯಕ್ಕೆ ಗಮನ ಕೊಡಬಾರದು ಎನ್ನೋದನ್ನು ಮರೆತು ಸಾಗುತ್ತಾ ಇರುತ್ತೀವಿ. ಕೆಟ್ಟ ಚಾಯ್ಸ್‌ಗಳಿಂದ ಅತ್ಯುತ್ತಮ ವಿಷಯಗಳನ್ನು ಮರೆತು ಸಮಸ್ಯೆ ಅನುಭವಿಸುತ್ತೀವಿ. ಸಂದರ್ಭ ಯಾವುದೇ ಇರಲಿ ಈ ಮೂರು ವಿಷಯಗಳಿಗೆ, ಜನರಿಗೆ ಪ್ರಾಮುಖ್ಯತೆ ನೀಡಿ..

ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿ. ಜಗತ್ತಿನಲ್ಲೇ ಯಾರೇ ನಿಮಗೆ ಹೆಚ್ಚು ಆತ್ಮೀಯರು ಅನಿಸಿರಬಹುದು. ಆದರೆ ಕುಟುಂಬವೇ ಎಲ್ಲಕ್ಕಿಂತ ಮುಖ್ಯ. ಅವರು ಕೊಡುವ ಸಲಹೆ, ಪ್ರೀತಿ, ನಿಸ್ವಾರ್ಥದ ಭಾವನೆ ಇನ್ನೆಲ್ಲೂ ಸಿಗೋದಿಲ್ಲ.

ಕೆಲಸಕ್ಕೆ ಪ್ರಾಮುಖ್ಯತೆ ಕೊಡಿ. ನಿಮ್ಮ ಕೆಲಸ ದೊಡ್ಡದೋ ಚಿಕ್ಕದೋ ಅಡ್ಡಿಯಿಲ್ಲ. ಮಾಡುವ ಕೆಲಸದ ಮೇಲೆ ನಿಷ್ಠೆ ಇರಲಿ. ಕಠಿಣ ಶ್ರಮ ಹಾಕಿ ಕೆಲಸ ಮಾಡಿ.

ದುಡ್ಡು! ಹೌದು, ಇದು ವಿಚಿತ್ರ ಎನಿಸಬಹುದು. ಇಡೀ ಲೋಕ ನಡೆಯುತ್ತಿರುವುದು ದುಡ್ಡಿನ ಮೇಲೆ. ನೀವು ಯಾರಿಗಾದರೂ ಹಣ ನೀಡಿ, ಆದರೆ ವಾಪಾಸ್‌ ಪಡೆಯುವುದು ಮರೆಯಬೇಡಿ. ನಿಮಗೆ ದುಡ್ಡು ಬೇಕು ಅಂದಾಗ ಒಂದು ಪೈಸೆ ಕೂಡ ತಂತಾನೆ ಹುಟ್ಟುವುದಿಲ್ಲ. ಹಣವನ್ನು ಗೌರವಿಸಿ. ಪೂಜಿಸಿ, ಮಿತವಾಗಿ ಬಳಸಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !