ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿಯ ಮರುಮದುವೆಯಿಂದ ಬೇಸತ್ತ ಪತ್ನೊಯೊಬ್ಬರು ತನ್ನ ಎರಡೂ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಬೋಡಾ ಪ್ರವೀಣ್ ಎನ್ನುವವರು ಮತ್ತೊಂದು ಮದುವೆಯಾಗಿದ್ದಾರೆ.
ಈ ನಿರ್ಧಾರದಿಂದ ಮನನೊಂದ ಪತ್ನಿ ಬಾನೋತ್ ಶ್ರಾವಂತಿ ತನ್ನ ಮಕ್ಕಳಾದ ಕಾರ್ತಿಕ್ ಹಾಗೂ ಕೌಶಿಕ್‌ಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರದ್ದು 13 ವರ್ಷಗಳ ದಾಂಪತ್ಯ. ಪ್ರವೀಣ್ ಇನ್ನೊಂದು ಹುಡುಗಿಯನ್ನು ಮದುವೆಯಾದ ನಂತರ ಶ್ರಾವಂತಿ ಜಗಳ ಆಡಿದ್ದರು. ಮನೆಯಲ್ಲಿ ನೆಮ್ಮದಿ ಇಲ್ಲದ ಕಾರಣ ತವರು ಮನೆ ಸೇರಿದ್ದರು. ಆದರೆ ಹಿರಿಯರು ಆಕೆಯ ಮನವೊಲಿಸಲು ಪ್ರಯತ್ನಿಸಿ ಹೈದರಾಬಾದ್‌ಗೆ ವಾಪಾಸ್ ಕಳಿಸಿದ್ದರು.
ಮಂಗಳವಾರ ಮಧ್ಯಾಹ್ನ, ಪ್ರವೀಣ್ ಮಧ್ಯಾಹ್ನ 1.30 ರ ಸುಮಾರಿಗೆ ಕೆಲಸದಿಂದ ಹಿಂತಿರುಗಿದಾಗ ಮುಖ್ಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಪದೇ ಪದೇ ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದರು. ಮನೆಯೊಳಗೆ ಮೂವರು ಶವವಾಗಿ ಪತ್ತೆಯಾಗಿದ್ದಾರೆ.
ಮಕ್ಕಳ ಶವಗಳು ಅವರ ತಾಯಿಯೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಮಹಿಳೆ ತೀವ್ರ ಹೆಜ್ಜೆ ಇಡುವ ಮೊದಲು ಮಕ್ಕಳ ಪ್ರಾಣ ಹೋಗಿತ್ತೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರವೀಣ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗುವುದು ಎಂದು ಕುಕತ್‌ಪಲ್ಲಿ ಡಿಸಿಪಿ ರಿತಿ ರಾಜ್ ತಿಳಿಸಿದ್ದಾರೆ.



