July 23, 2026
Thursday, July 23, 2026
spot_img

SKIN CARE | ಬೇಸಿಗೆಯಲ್ಲಿ ಗಬ್ಬು ಎನಿಸುವ ಬೆವರು ವಾಸನೆ ತಡೆಯೋದಕ್ಕೆ ಈ ರೀತಿ ಮಾಡಿ

ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಬೆವರು, ಹೆಚ್ಚು ಬೆವರುವ ಜನ ದುರ್ಗಂಧದಿಂದ ಮುಜುಗರ ಅನುಭವಿಸುತ್ತಾರೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟಿವಟಿಕೆಯಿಂದಾಗಿ ಕಾಣುವ ಈ ಸಮಸ್ಯೆಯು ಕೆಲವೊಮ್ಮೆ ನಮ್ಮ ಆತ್ಮವಿಶ್ವಾಸಕ್ಕೂ ಬಾಧೆ ತರುತ್ತದೆ. ಬೆವರುವುದು ಒಳ್ಳೆಯದೇ ಆದರೆ ಅತಿಯಾಗಿ ಹಾಗೂ ವಾಸನೆ ಬರುವಂತೆ ಬೆವರುವುದು ಸಮಸ್ಯೆ.

ಬೆವರಿನ ಸಮಸ್ಯೆಗೆ ಹೀಗೆ ಗುಡ್‌ಬೈ ಹೇಳಿ..

ದಿನಕ್ಕೆರಡು ಬಾರಿ ಸ್ನಾನ ಮಾಡಿ, ತಣ್ಣೀರು ಬೆಟರ್‌. ಸ್ನಾನದ ತಕ್ಷಣವೇ ರೋಲ್‌ ಆನ್‌ ಹಚ್ಚಿಬಿಡಿ.

ಆದಷ್ಟೂ ತಿಳಿಬಣ್ಣದ, ತೆಳುವಾದ, ಹತ್ತಿಯ ವಸ್ತ್ರಗಳು ಆರಾಮದಾಯಕ. ಮಾತ್ರವಲ್ಲ, ಇವು ಬೆವರನ್ನೂ ಹೀರಿಕೊಳ್ಳುತ್ತವೆ. ಬೆವರಾದ ವಸ್ತ್ರಗಳನ್ನು ತೊಳೆಯದೇ ಮತ್ತೆ ಧರಿಸುವಂತಿಲ್ಲ. 

ಡಿಯೋಡ್ರೆಂಟ್‌ ಬಳಕೆ ಮಾಡಿ, ಆದರೆ ಅತಿಯಾಗಿ ಬೇಡ. ಇದು ಚರ್ಮರೋಗ ತರುತ್ತದೆ. ಹಾಗೆಯೇ ಬೆವರಿನ ಜೊತೆ ಮಿಕ್ಸ್‌ ಆದರೆ ಇನ್ನೂ ಕೆಟ್ಟ ವಾಸನೆ ಬರುತ್ತದೆ.

ಬೇಕಿಂಗ್‌ ಸೋಡಾ- ನೀರಿನಲ್ಲಿ ಬೇಕಿಂಗ್‌ ಸೋಡಾ ಬೆರೆಸಿ ಪೇಸ್ಟ್‌ನಂತೆ ಮಾಡಿ, ಸ್ನಾನಕ್ಕೆ ಹೋಗುವ ಮುನ್ನ ಇದನ್ನು ಕಂಕುಳಿಗೆ ಹಚ್ಚಿ ಕೆಲವು ನಿಮಿಷ ಬಿಡಿ. ನಂತರ ಹದವಾದ ನೀರಿನಿಂದ ಸ್ನಾನ ಮಾಡಿ. ಇದರಿಂದ ಕಂಕುಳಲ್ಲಿ ಬೆಳೆಯುವ ಬೆವರಿನ ಬ್ಯಾಕ್ಟೀರಿಯಾ ಪ್ರಮಾಣವನ್ನು ಕಡಿಮೆ ಮಾಡಬಹುದು.

ತೆಂಗಿನ ಎಣ್ಣೆಗೆ ಕೆಲವು ಹನಿ ಟೀಟ್ರೀ ಎಣ್ಣೆಯನ್ನು ಬೆರೆಸಿ, ಹತ್ತಿಯಲ್ಲಿ ಅದ್ದಿಕೊಂಡು ಕಂಕುಳಲ್ಲಿ ಇರಿಸಿಕೊಳ್ಳಿ. ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣದಿಂದಾಗಿ ಬೆವರಿಗೆ ದುರ್ಗಂಧ ತಡೆಯುವಲ್ಲಿ ನೆರವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !