April 1, 2026
Wednesday, April 1, 2026
spot_img

ಇರಾನ್ ವಿರುದ್ದದ ಕದನದಿಂದ ಹಿಂದೆ ಸರಿಯಲು ಮುಂದಾದ ಅಮೆರಿಕ? ಟ್ರಂಪ್ ಕೊಟ್ಟ ಮುನ್ಸೂಚನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ವಿಶ್ವವನ್ನೇ ನಡುಗಿಸಿದ ಮಧ್ಯಪ್ರಾಚ್ಯದಲ್ಲಿನ ಕದನ ಶೀಘ್ರದಲ್ಲೇ ಕೊನೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ಸೂಚನೆ ನೀಡಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ ಮೇಲಿನ ಯುದ್ಧವನ್ನು ವಾಷಿಂಗ್ಟನ್ ಎರಡು ಮೂರು ವಾರಗಳಲ್ಲಿ ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ.

ಇರಾನ್‌ನೊಂದಿಗಿನ ನೇರ ಯುದ್ಧದಲ್ಲಿ ವಾಷಿಂಗ್ಟನ್ ಇನ್ನು ಹೆಚ್ಚು ಕಾಲ ಇರುವುದಿಲ್ಲ. ಆದರೆ ತಮ್ಮ ಮಿಲಿಟರಿ ಕ್ರಮ ಮತ್ತು ರಾಜತಾಂತ್ರಿಕ ಸಂಪರ್ಕ ಮುಂದುವರಿಯಲಿದ್ದು, ಅದಕ್ಕಾಗಿ ಎರಡು ಮೂರು ವಾರ ಬೇಕಾಗಬಹುವುದು ಎಂದು ತಿಳಿಸಿದ್ದಾರೆ.

ಆದಷ್ಟು ಬೇಗನೆ ನಾವು ಇರಾನ್‌ನಿಂದ ಹೊರಬರುತ್ತೇವೆ. ಬಹುಶಃ ಇನ್ನೊಂದು ಎರಡು ವಾರಗಳಲ್ಲಿ ಕೊನೆಯಾಗಲಿದೆ. ಆದರೆ ಇದರ ಅರ್ಥ ನಾವು ಟೆಹರಾನ್ ಜೊತೆ ನಡೆಸುವ ಒಪ್ಪಂದದ ಕಾರಣದಿಂದ ಹಿಂದೆ ಸರಿಯುತ್ತೇವೆ ಎಂದು ಅಲ್ಲ. ಇರಾನ್ ಹೊರ್ಮುಜ್ ಜಲಸಂಧಿ ಮುಚ್ಚಿ ತೈಲ ಟ್ಯಾಂಕರ್ ಸಂಚಾರಕ್ಕೆ ಅಡ್ಡಿ ಪಡಿಸಿದ್ದು, ಹೀಗಾಗಿ ಯಾವತ್ತಿಗೂ ಅವರ ಜೊತೆ ಒಪ್ಪಂದ ಇಲ್ಲ. ಪ್ರಸುತ್ತ ಇರಾನ್‌ನ ಪರಮಾಣು ಸಾಮರ್ಥ್ಯ ಕುಸಿದಿದ್ದು, ಈ ಕಾರಣದಿಂದಾಗಿ ನಾವು ಯುದ್ಧದಿಂದ ನಿರ್ಗಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !