ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀಕರತೆ ನಡುವೆ ಬಾಂಗ್ಲಾದೇಶದ ಆರು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ.
ಹಾರ್ಮುಜ್ ಜಲಸಂಧಿಯನ್ನು ದಾಟಲು ಕಾಯುತ್ತಿದ್ದ ಬಾಂಗ್ಲಾದೇಶದ ಆರು ಇಂಧನ ಹಡಗುಗಳಿಗೆ ಇರಾನ್ ಭದ್ರತಾ ಮಂಡಳಿ ಅನುಮೋದ ನೀಡಿದ್ದು, ಇದರ ಬೆನ್ನಲ್ಲೇ ಕತಾರ್‌ನಿಂದ ಐದು ಎಲ್‌ಎನ್‌ಜಿ ಹಡಗು ಮತ್ತು ಸೌದಿ ಅರೇಬಿಯಾದಿಂದ ಒಂದು ಕಚ್ಚಾ ತೈಲ ಸರಕು ಹೊತ್ತ ಹಡಗು ಹೊರಟಿದೆ. ಈ ಮೂಲಕ ಸುಮಾರು 5 ಲಕ್ಷ ಟನ್ ಎಲ್‌ಎನ್‌ಜಿ ಹಾಗೂ ಸುಮಾರು 79,000 ಟನ್ ಕಚ್ಚಾ ತೈಲ ಬಾಂಗ್ಲಾದೇಶದ ಕಡೆ ಸಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಢಾಕಾದಲ್ಲಿರುವ ಇರಾನ್ ರಾಯಭಾರಿ ಜಲೀಲ್ ರಹೀಮಿ ಜಹಾನಾಬಾದಿ, ಬಾಂಗ್ಲಾದೇಶಿಗಳು ತೊಂದರೆ ಅನುಭವಿಸುವುದನ್ನು ಇರಾನ್ ನೋಡಲು ಬಯಸುವುದಿಲ್ಲ. ಹಾಗಾಗಿ ಹಾರ್ಮುಜ್ ಜಲಸಂಧಿ ಮೂಲಕ ಇಂಧನ ಸಾಗಿಸಲು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.



