April 2, 2026
Thursday, April 2, 2026
spot_img

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಇಂಧನ ದರ ಸ್ಥಿರ: ಪ್ರಹ್ಲಾದ್ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರವಾಗುತ್ತಿರುವ ಸಂದರ್ಭದಲ್ಲೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇಂಧನ ದರ ಏರಿಕೆ ಬಗ್ಗೆ ಜನರಲ್ಲಿ ಮೂಡಿರುವ ಆತಂಕದ ನಡುವೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಾತನಾಡಿದ ಅವರು, ವಿಶ್ವದ ಹಲವು ಭಾಗಗಳಲ್ಲಿ ಸಂಘರ್ಷ, ಯುದ್ಧ ಮತ್ತು ಅಶಾಂತಿ ಮುಂದುವರಿದಿದ್ದರೂ ಭಾರತದಲ್ಲಿ ಅಂತಹ ಪರಿಸ್ಥಿತಿ ಕಾಣಿಸಿಲ್ಲ. ಇಂಧನ ದರಗಳಿಗೆ ಸಂಬಂಧಿಸಿದ ಕೆಲವು ಸವಾಲುಗಳಿದ್ದರೂ, ದೇಶದಲ್ಲಿ ಶಾಂತಿ ಮತ್ತು ಧಾರ್ಮಿಕ ಸೌಹಾರ್ದತೆ ಅಚಲವಾಗಿ ಮುಂದುವರಿದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಈ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ ಜೋಶಿ, ಗಂಗಾ ನದಿ ಹೇಗೆ ಪಾಪಗಳನ್ನು ತೊಳೆಯುತ್ತದೆಯೋ, ಅದೇ ರೀತಿ ಸಿದ್ಧಗಂಗಾ ಮಠವು ಲಕ್ಷಾಂತರ ಬಡಜನರ ಬದುಕಿಗೆ ಬೆಳಕು ನೀಡುತ್ತಿದೆ ಎಂದು ಹೇಳಿದರು.

ರಾಜಕಾರಣಿಗಳು ದೇಶವನ್ನು ಆಡಳಿತ ನಡೆಸಬಹುದು, ಆದರೆ ಶ್ರೀ ಶಿವಕುಮಾರ ಸ್ವಾಮೀಜಿಯವರು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ದ ಮಹಾನ್ ದಾರಿದೀಪರಾಗಿದ್ದಾರೆ ಎಂದು ಅವರು ಕೊಂಡಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !