September 16, 2026
Wednesday, September 16, 2026
spot_img

ಖದೀಮರ ‘ನಕಲಿ’ ಆಟಕ್ಕೆ ಪೊಲೀಸರ ‘ಗೂಗ್ಲಿ’: ಇನ್ಮುಂದೆ ಐಪಿಎಲ್ ಟಿಕೆಟ್ ಫುಲ್ ಡಿಜಿಟಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಹಬ್ಬದ ಜೋಶ್ ಒಂದೆಡೆಯಾದರೆ, ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಟಿಕೆಟ್ ಕಿಲಾಡಿಗಳ ಹಾವಳಿ ಪೊಲೀಸರಿಗೆ ತಲೆನೋವಾಗಿತ್ತು. ಇತ್ತೀಚೆಗೆ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ಪಂದ್ಯದ ವೇಳೆ ಸಾವಿರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸಿದ ಅಭಿಮಾನಿಗಳು ಸ್ಟೇಡಿಯಂ ಗೇಟ್ ಬಳಿ ಸ್ಕ್ಯಾನ್ ಮಾಡಿದಾಗ ಅದು ‘ಫೇಕ್’ ಎಂದು ತಿಳಿದು ಶಾಕ್ ಆಗಿದ್ದರು.

ಈ ಬೃಹತ್ ಜಾಲವನ್ನು ಬೇಧಿಸಿರುವ ಬೆಂಗಳೂರು ಪೊಲೀಸರು, ಇನ್ಮುಂದೆ ನಕಲಿ ಟಿಕೆಟ್ ಆಟ ನಡೆಯಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ 5 ರಂದು ನಡೆಯಲಿರುವ ಹೈವೋಲ್ಟೇಜ್ ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ 1,500 ರೂ. ಮೌಲ್ಯದ ಟಿಕೆಟ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ವಿತರಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು ಪೊಲೀಸರು ಮತ್ತು ಮೆಟ್ರೋ ಆಡಳಿತ ಮಂಡಳಿ ಜಂಟಿಯಾಗಿ ಜಾರಿಗೆ ತಂದ ‘ಐಪಿಎಲ್ ಟಿಕೆಟ್ ಜೊತೆ ಮೆಟ್ರೋ ಪ್ರಯಾಣ’ ಎಂಬ ವಿನೂತನ ಪ್ರಯೋಗ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕ್ರಿಕೆಟ್ ಟಿಕೆಟ್‌ನಲ್ಲೇ ಮೆಟ್ರೋ ಪ್ರಯಾಣದ ಸೌಲಭ್ಯ ನೀಡುತ್ತಿರುವ ಈ ಸ್ಮಾರ್ಟ್ ಐಡಿಯಾವನ್ನು ಕಂಡು ಮುಂಬೈ, ಚೆನ್ನೈ ಹಾಗೂ ದೆಹಲಿ ಮೆಟ್ರೋ ಅಧಿಕಾರಿಗಳು ಬೆರಗಾಗಿದ್ದಾರೆ. ಈ ಯಶಸ್ವಿ ವ್ಯವಸ್ಥೆಯನ್ನು ತಮ್ಮ ನಗರಗಳಲ್ಲೂ ಅಳವಡಿಸಿಕೊಳ್ಳಲು ಬಿಎಂಆರ್‌ಸಿಎಲ್‌ ಅಧಿಕಾರಿಗಳ ಮೊರೆ ಹೋಗುತ್ತಿರುವುದು ಬೆಂಗಳೂರಿನ ಹಿರಿಮೆಯನ್ನು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !