ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರುತಿ 800 ಕಾರು, ಮಂಗಳೂರಿನ ಮೂವರು ಸ್ನೇಹಿತರು, 11 ರಾಜ್ಯಗಳ ಓಡಾಟ, ತಿಂಗಳ ನಂತರ ಲಡಾಕ್ನಲ್ಲಿ ಹೆಜ್ಜೆ!!
ಇದೆಲ್ಲ ಯಾವುದೋ ಸಿನಿಮಾ ಹೈಲೈಟ್ಸ್ ಎನಿಸುತ್ತಿದೆಯಾ? ಖಂಡಿತಾ ಇಲ್ಲ! ಒಂದು ಮಾರುತಿ ಕಾರ್ನಲ್ಲಿ ಟ್ರಿಪ್ ಹೊರಟು, ಎಲ್ಲ ಅಡೆತಡೆಗಳನ್ನು ಮೀರಿ ಲಡಾಕ್ ತಲುಪಿದ ಯುವಕರ ರಿಯಲ್ ಅಡ್ವೆಂಚರ್ ಸ್ಟೋರಿ.
ಹೌದು, ಮಂಗಳೂರಿನ ಹರೀಶ್ ಭಟ್, ಕೃಷ್ಣಪ್ರಸಾದ್ ಭಟ್ ಹಾಗೂ ರಾಕೇಶ್ ಬೋಳಾರ್ ಅರಣ್ಯ ಉಳಿಸಿ ಎನ್ನುವ ಸಂದೇಶದೊಂದಿಗೆ ಅಕ್ಟೋಬರ್ 19ರಂದು ತಮ್ಮ ಸಾಹಸಯಾತ್ರೆಯನ್ನು ಮಾರುತಿ 800 ಕಾರಿನಲ್ಲಿ ಆರಂಭಿಸುತ್ತಾರೆ. ಈ ಕಾರಿನಲ್ಲಿ ಎಸಿ ಇಲ್ಲ. ಜಿಪಿಎಸ್ ಇಲ್ಲ, ಕಂಫರ್ಟಬಲ್ ಆದ ಸೀಟ್ಗಳಿಲ್ಲ, ಸಾಕು ಎನಿಸುವಷ್ಟು ಜಾಗವೂ ಇಲ್ಲ. ಹಾಗೆಯೇ ಕಂಪ್ಲೆಂಟ್ ಮಾಡುವ ಜನರೂ ಇಲ್ಲ!
ದೊಡ್ಡ ಎಸ್ಯುವಿ ಕಾರ್ನಲ್ಲಿ ಟ್ರಾವೆಲ್ ಮಾಡಿದರೂ ಅದು ಸರಿ ಇಲ್ಲ, ಇದು ಸಾಕಾಗ್ತಿಲ್ಲ, ಕೈ ಕಾಲು ನೋವಾಗಬಹುದು ಎಂದು ಟ್ರಿಪ್ ಪ್ಲಾನ್ ಸ್ಕಿಪ್ ಮಾಡುವ ಜನರು ಈ ಸುದ್ದಿಯನ್ನು ಮಿಸ್ ಮಾಡದೇ ಓದಿ. ಟ್ರಾವೆಲ್ ಮಾಡಬೇಕು ಎನ್ನುವ ಆಸೆಯಿದ್ದವರು ಹೊಸ ವಸ್ತುಗಳನ್ನು, ಹೊಸ ವಾಹನವನ್ನು ಹುಡುಕೋದಿಲ್ಲ. ಇರುವುದರಲ್ಲೇ ಟ್ರಿಪ್ ಮಾಡಿ ಮುಗಿಸಿಬಿಡುತ್ತಾರೆ. ಅದಕ್ಕೆ ಈ ಕರಾವಳಿ ಬಾಯ್ಸ್ ಸಾಕ್ಷಿಯಾಗಿದ್ದಾರೆ. ಮಂಗಳೂರಿನ ಈ ಮೂವರು ಸ್ನೇಹಿತರು ತಮ್ಮ 25 ವರ್ಷ ಹಳೆಯ, 2001ರ ಮಾಡೆಲ್ನ ಪುಟ್ಟ ಮಾರುತಿ 800 ಕಾರಿನಲ್ಲೇ ಲಡಾಖ್ ಪ್ರವಾಸ ಕೈಗೊಂಡು ಗಮನ ಸೆಳೆದಿದ್ದಾರೆ. ಇದು ಬರೀ ಟ್ರಿಪ್ ಅಷ್ಟೇ ಅಲ್ಲ. ಪ್ರಯಾಣ ಮಾರ್ಗದಲ್ಲಿ ಸಿಗುವ ಸ್ಥಳೀಯ ಸಮುದಾಯಗಳ ಜೊತೆ ಬೆರೆದು ಅವರಿಗೆ ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಕಾರ್ನಲ್ಲಿ ಹೋಗಿದ್ದೇ ದೊಡ್ಡ ಸವಾಲು
ಈ ಟ್ರಿಪ್ನ ಮೊದಲ ದೊಡ್ಡ ಸವಾಲು ಅಂದ್ರೆ ಅದು 2001ರ ಮಾಡೆಲ್ನ ಮಾರುತಿ 800 ಕಾರ್. ಹೌದು, ಎಸಿ ಇಲ್ಲದೇ ಸದಾ ಕಿಟಕಿಯನ್ನು ತೆಗೆದುಕೊಂಡು ಹೋಗುವುದು ಕಾರ್ನ ವೇಗದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಜಿಪಿಎಸ್ ಇಲ್ಲದ ಕಾರಣ ರಸ್ತೆಗಳು ಗೊತ್ತಾಗದೇ ಗೊಂದವಾಯಿತು. ಹವಾಮಾನ ವೈಪರೀತ್ಯದ ಕಾರಣ ಮೈನಸ್ 14 ಡಿಗ್ರಿ ಸೆಲ್ಸಿಯಸ್ನಷ್ಟು ತೀವ್ರ ಚಳಿಯಲ್ಲೂ ಕಾರು ಚಾಲನೆ ಮಾಡಬೇಕಾಯಿತು ಎಂದು ರಾಕೇಶ್ ಹೇಳಿದ್ದಾರೆ.
ಕಾರಿನಲ್ಲಿ ಪ್ರಯಾಣಿಸಿದರೆ ಅಸಲಿ ಮಜ!
ಭಾರತದ ವೈವಿಧ್ಯತೆಯನ್ನು ಅನುಭವಿಸಬೇಕಾದರೆ ಕಾರಿನಲ್ಲಿಯೇ ಟ್ರಾವೆಲ್ ಮಾಡಬೇಕು. ವಿಮಾನದಲ್ಲಿ ಕಣ್ಮುಚ್ಚಿ ಕಣ್ಣು ತೆಗೆಯುವುದರ ಒಳಗಾಗಿ ಸ್ಥಳವನ್ನು ತಲುಪಿಬಿಡುತ್ತೀವಿ. ಆದರೆ ಜನರ ಬಳಿ ಮಾತು, ಲೋಕಲ್ ಊಟ, ನಿಸರ್ಗವನ್ನು ಸವಿಯಲು ರಸ್ತೆ ಬೆಸ್ಟ್. ನಮ್ಮ ಕಾರ್ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ. ಏನೇ ಸಮಸ್ಯೆಯಾದರೂ ಸರಿಪಡಿಸಿಕೊಳ್ಳಲು ಬಿಡಿ ಭಾಗಗಳನ್ನು ತೆಗೆದುಕೊಂಡು ಹೋಗಿದ್ದೆವು. ಆರೋಗ್ಯ ಹದಗೆಟ್ಟರೆ ಎಂದು ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡುಹೋಗಿದ್ದೆವು ಎಂದು ಹರೀಶ್ ಹೇಳಿದ್ದಾರೆ.
ಮಂಗಳೂರಿಗೆ ವಾಪಾಸ್
ಪ್ರಯಾಣದ ವೇಳೆ ಕೆಲವೊಮ್ಮೆ ಕಪ್ಪು ಗಂಜುಗಡ್ಡೆ ಸಿಗುತ್ತಿತ್ತು. ಇದು ವಾಹನಗಳ ಚಕ್ರವನ್ನು ಜಾರುವಂತೆ ಮಾಡುತ್ತಿತ್ತು. ರಾತ್ರಿಯ ವೇಳೆ ಪ್ರಯಾಣವನ್ನು ಬಂದ್ ಮಾಡಿ ಯಾವ ಊರಿನಲ್ಲಿ ಇದ್ದೆವೋ ಅಲ್ಲಿಯೇ ಜರ್ನಿ ಮುಗಿಸಿ ಸ್ಟೇ ಮಾಡುತ್ತಿದ್ದೆವು. ಬೆಳಗ್ಗೆ ಮಾತ್ರ ಪ್ರಯಾಣ ಮಾಡುತ್ತಿದ್ದೆವು. ಒಟ್ಟಾರೆ ರೋಲರ್ ಕೋಸ್ಟರ್ನಂತರ ಟ್ರಿಪ್ ಮುಗಿಸಿ ಮಂಗಳೂರಿಗೆ ತಲುಪಿದ್ದೇವೆ ಎಂದು ಲಡಾಖ್ ಟ್ರಿಪ್ ಮಾಡಿದ ಸ್ನೇಹಿತರು ಖುಷಿಯಿಂದ ಹೇಳಿಕೊಂಡಿದ್ದಾರೆ.



