April 2, 2026
Thursday, April 2, 2026
spot_img

ಆಟೋ ಚಾಲಕರಿಗೆ ಮಧ್ಯಪ್ರಾಚ್ಯ ಯುದ್ಧದ ಗುದ್ದು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೀಟರ್‌ ಎಲ್‌ಪಿಜಿ ದರ 92.10 ರೂಪಾಯಿಗೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಮಧ್ಯಪ್ರಾಚ್ಯ ಯುದ್ಧದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊ ಎಲ್‌ಪಿಜಿ ಕೊರತೆ ಎದುರಾಗಿದ್ದು, ದರ ಕೂಡ ಭಾರಿ ಏರಿಕೆಯಾಗಿದೆ.


ವಾರದ ಹಿಂದಷ್ಟೇ 70 ರಿಂದ 80 ರೂಪಾಯಿಯಷ್ಟಿದ್ದ ಬೆಲೆ ಈಗ ಲೀಟರ್‌ಗೆ ಬರೋಬ್ಬರಿ 92.10 ರೂಪಾಯಿ ಏರಿಕೆಯಾಗಿದೆ. ಯುದ್ಧ ಆರಂಭವಾಗುವ ಮೊದಲು ಆಟೊ ಎಲ್‌ಪಿಜಿ ದರ ಲೀಟರ್‌ಗೆ 62 ರೂಪಾಯಿ ಇತ್ತು. ಯುದ್ಧ ಆರಂಭವಾದ ಬಳಿಕ 80 ರೂಪಾಯಿಗೆ ಏರಿಕೆಯಾಗಿತ್ತು. ಈಗ ದಿಢೀರನೆ ದರ ಏರಿಕೆ ಮಾಡಲಾಗಿದ್ದು, ಆಟೋ ಚಾಲಕರು ಈ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !