April 3, 2026
Friday, April 3, 2026
spot_img

CINE | ‘ಧುರಂಧರ್ 2’ ಅಬ್ಬರಕ್ಕೆ ಪತರುಗುಟ್ಟಿದ ಸಿನಿ ಲೋಕ: ಮುಂದಕ್ಕೆ ಹೋಗ್ತಿದೆ ಸಿನಿಮಾ ರಿಲೀಸ್ ಡೇಟ್ ಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಿತ್ಯ ಧಾರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದರ ಪರಿಣಾಮವಾಗಿ ಹಲವು ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕಗಳಲ್ಲಿ ಬದಲಾವಣೆ ಕಂಡುಬಂದಿದೆ.

ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಆಕ್ಷನ್ ಚಿತ್ರ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದು ದಾಖಲೆ ಮಟ್ಟದ ಗಳಿಕೆ ಮಾಡುತ್ತಿದೆ. ಚಿತ್ರದ ಯಶಸ್ಸಿನಿಂದಾಗಿ ಇತರೆ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರ ಘರ್ಷಣೆಯಿಂದ ದೂರವಿಡಲು ಮುಂದಾಗಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಚಿತ್ರವನ್ನು ಏಪ್ರಿಲ್ ಮಧ್ಯಭಾಗಕ್ಕೆ ಮುಂದೂಡಲಾಗಿದೆ. ಅದೇ ರೀತಿ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಕೂಡ ಹೊಸ ಬಿಡುಗಡೆ ದಿನಾಂಕದತ್ತ ಸಾಗುತ್ತಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ:

ದಕ್ಷಿಣ ಚಿತ್ರರಂಗದಲ್ಲೂ ಇದರ ಪ್ರಭಾವ ಕಾಣಿಸಿಕೊಂಡಿದ್ದು, ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅಭಿನಯದ ‘ಪೇಟ್ರಿಯಾಟ್’ ಚಿತ್ರದ ಬಿಡುಗಡೆಯೂ ಮುಂದೂಡಲಾಗಿದೆ. ಇದೇ ವೇಳೆ ‘ದೃಶ್ಯಂ 3’ ಹಾಗೂ ‘ಪೆದ್ದಿ’ ಸಿನಿಮಾಗಳ ದಿನಾಂಕಗಳಲ್ಲೂ ಬದಲಾವಣೆಗಳ ಮಾತು ಕೇಳಿಬರುತ್ತಿದೆ.

ಇನ್ನೊಂದೆಡೆ, ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮೊದಲು ಇದೇ ದಿನ ಬಿಡುಗಡೆಯಾಗಬೇಕಾಗಿತ್ತು. ಆದರೆ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಮತ್ತು ವಿದೇಶಿ ಮಾರುಕಟ್ಟೆ ಲೆಕ್ಕಾಚಾರದಿಂದ ಚಿತ್ರವನ್ನು ಜೂನ್ 4ಕ್ಕೆ ಮುಂದೂಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !