ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದ್ದು, ಒಂದೇ ಟ್ರಂಪ್ ಮಾತುಕತೆ ಪ್ರಸ್ತಾಪ ಇಡುತ್ತಿದ್ದರೆ, ಮತ್ತೊಂದೆಡೆ ಇರಾನ್ ಅಮೆರಿಕದ ಎಫ್-35 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಇದರಿಂದ ಯುದ್ಧದ ಭೀಕರತೆ ಹೆಚ್ಚುತ್ತಿದೆ.
ಈ ಕುರಿತು ಇರಾನ್ ಮಾಧ್ಯಮಗಳು ವರದಿ ಮಾಡುತ್ತಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಮೆರಿಕದ F-35 ಸ್ಟೆಲ್ತ್ ಫೈಟರ್ ವಿಮಾನವನ್ನು ಹೊಡೆದುರುಳಿಸಿದ್ದು, ಪೈಲಟ್ ಗಂಭೀರ ಗಾಯಗೊಂಡಿದ್ದು, ಬದುಕಿರುವುದು ಅನುಮಾನ ಎಂದು ತಿಳಿಸಿವೆ. ಆದರೆ, ಈ ಬಗ್ಗೆ ಅಮೆರಿಕದಿಂದ ಇಲ್ಲಿಯವರೆಗೆ ಯಾವುದೇ ದೃಢೀಕರಣ ಬಂದಿಲ್ಲ.
ಎಫ್-35 ಲೈಟ್ನಿಂಗ್ II ಜೆಟ್ ವಿಶ್ವದ ಅತ್ಯಂತ ಅಧುನಿಕ ಸ್ಟೆಲ್ತ್ ಫೈಟರ್ ಜೆಟ್ ಆಗಿದ್ದು, ಇದು ರಾಡಾರ್ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.



