April 3, 2026
Friday, April 3, 2026
spot_img

ಇಸ್ರೇಲ್-ಅಮೆರಿಕ ದಾಳಿಗೆ ಇರಾನ್‌ ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ರೆಝಾಯ್ ಸಾವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಕದನ ತಾರಕ್ಕೇರಿದ್ದು, ಇಸ್ರೇಲ್-ಅಮೆರಿಕ ನಡೆಸಿದ ದಾಳಿಗೆ ಇರಾನ್‌ನ ನೌಕಾಪಡೆಯ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆಯಾಗಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.

ಭೀಕರ ಯುದ್ಧದಿಂದಾಗಿ ಈಗಾಗಲೇ ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಹಿತ ಅನೇಕ ಪ್ರಮುಖ ನಾಯಕರನ್ನು ಕಳೆದುಗೊಂಡಿದ್ದು, ಇದರ ಬೆನ್ನಿಗೆ ಬೆಹ್ನಾಮ್ ರೆಝಾಯ್ ಹತ್ಯೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ.

ಇರಾನ್‌ನ ಮಿಲಿಟರಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಹ್ನಾಮ್ ರೆಝಾಯ್, ಸಮುದ್ರ ಬೆದರಿಕೆಗಳ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಜೊತೆಗೆ ಗುಪ್ತಚರ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು.

ಇರಾನ್ ,ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಸದ್ಯದ ಪರಿಸ್ಥಿತಿ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಆತಂಕವೇ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !