April 4, 2026
Saturday, April 4, 2026
spot_img

CSK Vs PBKS | ಚೆಪಾಕ್‌ನಲ್ಲಿ ಸಿಎಸ್‌ಕೆ ಮುಗ್ಗರಿಸೋದಕ್ಕೆ ಇದೇ 3 ಕಾರಣ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆಪಾಕ್‌ನಂತಹ ತವರಿನ ಮೈದಾನದಲ್ಲಿ 209 ರನ್‌ಗಳ ದೊಡ್ಡ ಮೊತ್ತ ಕಲೆ ಹಾಕಿದರೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಲು ವಿಫಲವಾಯಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಈ ಸೋಲಿಗೆ ಮೂರು ಪ್ರಮುಖ ಕಾರಣಗಳು ಸ್ಪಷ್ಟವಾಗಿ ಕಾಣಿಸಿಕೊಂಡವು.

ಚೆನ್ನೈ ಪರ ಆರಂಭಿಕ ವಿಕೆಟ್ ಬೇಗ ಕುಸಿದದ್ದು ತಂಡದ ಮೇಲೆ ಒತ್ತಡ ತಂದಿತು. ಸಂಜು ಸ್ಯಾಮ್ಸನ್ ಶೀಘ್ರದಲ್ಲೇ ಪೆವಿಲಿಯನ್ ಸೇರಿದ್ದು ರನ್‌ರೇಟ್ ಮೇಲೆ ಪರಿಣಾಮ ಬೀರಿತು. ಋತುರಾಜ್ ಗಾಯಕ್ವಾಡ್ ಕೂಡ ಆರಂಭದಲ್ಲಿ ನಿರೀಕ್ಷಿತ ವೇಗದಲ್ಲಿ ಆಡಲಿಲ್ಲ. ಪವರ್‌ಪ್ಲೇಯಲ್ಲಿ ವೇಗದ ರನ್‌ಗಳು ಬರದೇ ಹೋದದ್ದು ಕೊನೆಯಲ್ಲಿ ದೊಡ್ಡ ವ್ಯತ್ಯಾಸ ತಂದಿತು.

209 ರನ್‌ಗಳ ಗುರಿ ಇದ್ದರೂ ಬೌಲರ್‌ಗಳು ಅದನ್ನು ರಕ್ಷಿಸಲು ವಿಫಲರಾದರು. ವಿಶೇಷವಾಗಿ ಮಧ್ಯ ಓವರ್‌ಗಳಲ್ಲಿ ವಿಕೆಟ್ ಪಡೆಯಲು ಆಗದೇ, ಪಂಜಾಬ್ ಬ್ಯಾಟರ್‌ಗಳಿಗೆ ಮುಕ್ತ ಅವಕಾಶ ಸಿಕ್ಕಿತು. ನಾಯಕ ಋತುರಾಜ್ ಕೂಡ ಸ್ಪಿನ್ನರ್‌ಗಳ ‘ಆಫ್ ಡೇ’ ಸೋಲಿಗೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:

ಶ್ರೇಯಸ್ ಆಯ್ಯರ್ ಕ್ರೀಸ್‌ಗೆ ಬಂದ ಬಳಿಕ ಪಂದ್ಯವೇ ಪಂಜಾಬ್ ಕಡೆ ತಿರುಗಿತು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಮಧ್ಯ ಓವರ್‌ಗಳಲ್ಲಿ ಚೆನ್ನೈ ಬೌಲಿಂಗ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಅವರ ಜೊತೆಗೆ ವಧೇರಾ ನೀಡಿದ ಸಾಥ್ ಗೆಲುವು ಸುಲಭಗೊಳಿಸಿತು.

ಒಟ್ಟಿನಲ್ಲಿ, ಆರಂಭಿಕ ಒತ್ತಡ + ಕಳಪೆ ಬೌಲಿಂಗ್ + ಶ್ರೇಯಸ್ ಸ್ಫೋಟಕ ಬ್ಯಾಟಿಂಗ್ ಇವೇ ಚೆನ್ನೈ ಸೋಲಿನ 3 ಮುಖ್ಯ ಕಾರಣಗಳು ಎಂದರೂ ತಪ್ಪಾಗಲಾರದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !