September 16, 2026
Wednesday, September 16, 2026
spot_img

ಬಾಂಗ್ಲಾ ಅಂಗಳಕ್ಕೆ ಟೀಮ್ ಇಂಡಿಯಾ ಎಂಟ್ರಿ: ಬಹುನಿರೀಕ್ಷಿತ ಸರಣಿಯ ವೇಳಾಪಟ್ಟಿ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಬಾಂಗ್ಲಾದೇಶ ನಡುವೆ ಕಳೆದ ವರ್ಷ ರದ್ದಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯು ಅಂತಿಮವಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲು ಸಿದ್ಧವಾಗಿದೆ.

2025ರ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಈ ಪ್ರವಾಸವು ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮತ್ತು ಆಂತರಿಕ ಕಲಹದ ಕಾರಣದಿಂದ ರದ್ದಾಗಿತ್ತು. ಇದೀಗ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಸರಣಿಯನ್ನು ಮರು ಆಯೋಜಿಸಲು ಒಮ್ಮತಕ್ಕೆ ಬಂದಿವೆ.

2024ರಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಬಾಂಗ್ಲಾದೇಶದಲ್ಲಿ ಉಂಟಾಗಿದ್ದ ನಾಗರಿಕ ಅಸ್ಥಿರತೆಯು ಆಟಗಾರರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿತ್ತು. ಈ ಕಾರಣದಿಂದ ಭಾರತ ಸರ್ಕಾರ ಮತ್ತು ಬಿಸಿಸಿಐ ಪ್ರವಾಸಕ್ಕೆ ತಡೆ ನೀಡಿದ್ದವು. ಇದೀಗ ಅಲ್ಲಿ ಹೊಸ ಸರ್ಕಾರ ರಚನೆಯಾಗಿ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಸರಣಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಈ ಪ್ರವಾಸದಲ್ಲಿ ಭಾರತ ತಂಡವು 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಗಮನಾರ್ಹವೆಂದರೆ, ಬಾಂಗ್ಲಾದೇಶದ ನೆಲದಲ್ಲಿ ಭಾರತ ತಂಡವು ದ್ವಿಪಕ್ಷೀಯ ಟಿ20 ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಈ ಐತಿಹಾಸಿಕ ಸರಣಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಐರ್ಲೆಂಡ್ ಪ್ರವಾಸವನ್ನು ಮುಂದೂಡಿ, ಟೀಮ್ ಇಂಡಿಯಾ ಆತಿಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಭಾರತ ತಂಡವು ಆಗಸ್ಟ್ 28, 2026 ರಂದು ಬಾಂಗ್ಲಾ ತಲುಪುವ ನಿರೀಕ್ಷೆಯಿದೆ. ಪಂದ್ಯಗಳ ವಿವರ ಇಲ್ಲಿದೆ:

ದಿನಾಂಕಪಂದ್ಯಸ್ಥಳ
ಸೆಪ್ಟೆಂಬರ್ 11ನೇ ಏಕದಿನ ಪಂದ್ಯಮೀರ್‌ಪುರ
ಸೆಪ್ಟೆಂಬರ್ 32ನೇ ಏಕದಿನ ಪಂದ್ಯಮೀರ್‌ಪುರ
ಸೆಪ್ಟೆಂಬರ್ 63ನೇ ಏಕದಿನ ಪಂದ್ಯಚಟ್ಟೋಗ್ರಾಮ್
ಸೆಪ್ಟೆಂಬರ್ 91ನೇ ಟಿ20 ಪಂದ್ಯಚಟ್ಟೋಗ್ರಾಮ್
ಸೆಪ್ಟೆಂಬರ್ 122ನೇ ಟಿ20 ಪಂದ್ಯಮೀರ್‌ಪುರ
ಸೆಪ್ಟೆಂಬರ್ 133ನೇ ಟಿ20 ಪಂದ್ಯಮೀರ್‌ಪುರ

ಸದ್ಯ ಬಿಸಿಸಿಐ ಈ ಪ್ರವಾಸಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಮುದ್ರೆ ಬೀಳುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !