September 16, 2026
Wednesday, September 16, 2026
spot_img

ಹೈದರಾಬಾದ್‌ ತಂಡಕ್ಕೆ ಶಾಕ್: ಐಪಿಎಲ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಲಯಬದ್ಧವಾಗಿ ತನ್ನ ಅಭಿಯಾನ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಆಘಾತ ಸುದ್ದಿ ಎದುರಾಗಿದ್ದು, ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಫ್ರಾಂಚೈಸ್ ಅನ್ನು ಬಿಟ್ಟು ಮನೆಯತ್ತ ಮುಖಮಾಡಿದ್ದಾರೆ.

ಬೆನ್ನುನೋವಿನಿಂದ ಬಳಲುತ್ತಿರುವ ಕಮ್ಮಿನ್ಸ್ ಮೊದಲ ಎರಡು ಪಂದ್ಯಗಳಲ್ಲಿ ಆಡಲಿಲ್ಲ. ಹೀಗಾಗಿ ಇಶಾನ್ ಕಿಶನ್ ನಾಯಕತ್ವ ವಹಿಸುತ್ತಿದ್ದರು. ಆದರೆ ಇದೀಗ ಕಮ್ಮಿನ್ಸ್ ಗಾಯವು ಚೇತರಿಕೆ ಕಾಣದ ಕಾರಣ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಮೇಲ್ವಿಚಾರಣೆಯಲ್ಲಿ ಕಮ್ಮಿನ್ಸ್ ಬೆನ್ನುನೋವಿನ ಸ್ಕ್ಯಾನಿಂಗ್​ ನಡೆಯಲಿದ್ದು, ಹೀಗಾಗಿ ತವರಿಗೆ ತೆರಳಿದ್ದು, ಏಪ್ರಿಲ್ 17 ರೊಳಗೆ ಅವರು ಮತ್ತೆ ಎಸ್‌ಆರ್‌ಹೆಚ್‌ ತಂಡ ಸೇರುವ ನೀರಿಕ್ಷೆಯಿದೆ.

ಹೈದರಾಬಾದ್ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಇನ್ನೊಂದನ್ನು ಸೋತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !