ಜಿಮ್‌ಗೆ ಹೋಗೋ ನಿರ್ಧಾರ ತಗೋಂಡಿದ್ರೆ ಅದು ನಿಮ್ಮ ಫಿಟ್ನೆಸ್ ಜರ್ನಿಯ ದೊಡ್ಡ ಹೆಜ್ಜೆ. ಆದರೆ ಮೊದಲ ದಿನವೇ ಹೆಚ್ಚು ಉತ್ಸಾಹದಲ್ಲಿ ತಪ್ಪು ಮಾಡೋದು ಸಾಮಾನ್ಯ. ಅದಕ್ಕಾಗಿ ಜಿಮ್ ವರ್ಕೌಟ್ ಆರಂಭಿಸುವ ಮೊದಲು ಕೆಲವು ಮುಖ್ಯ ವಿಷಯಗಳನ್ನು ತಿಳಿದುಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ.
ನಿಮ್ಮ ಗುರಿ ಸ್ಪಷ್ಟವಾಗಿರಲಿ
ಮೊದಲು ನಿಮಗೆ ತೂಕ ಕಡಿಮೆ ಮಾಡಬೇಕಾ, ಮಸಲ್ ಹೆಚ್ಚಿಸಬೇಕಾ ಅಥವಾ ಫಿಟ್ ಆಗಿರಬೇಕಾ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿ. ಗುರಿಗೆ ತಕ್ಕಂತೆ ವರ್ಕೌಟ್ ಪ್ಲಾನ್ ಬದಲಾಗುತ್ತದೆ.
ಮೊದಲ ದಿನವೇ ಹೆವಿ ವರ್ಕೌಟ್ ಬೇಡ
ಬಹಳಷ್ಟು ಜನ ಮೊದಲ ದಿನವೇ ಹೆಚ್ಚು ತೂಕ ಎತ್ತಲು ಪ್ರಯತ್ನಿಸುತ್ತಾರೆ. ಇದು ಗಾಯದ ಅಪಾಯ ಹೆಚ್ಚಿಸುತ್ತದೆ. ಲೈಟ್ ವರ್ಕೌಟ್ ಮತ್ತು ಸರಿಯಾದ ಫಾರ್ಮ್‌ನಿಂದ ಆರಂಭಿಸುವುದು ಮುಖ್ಯ.
ಇದನ್ನೂ ಓದಿ:
ವಾರ್ಮ್ ಅಪ್ ಮಿಸ್ ಮಾಡಬೇಡಿ
ಜಿಮ್ ಶುರು ಮಾಡುವ ಮೊದಲು 5 ರಿಂದ 10 ನಿಮಿಷ ವಾರ್ಮ್ ಅಪ್ ಮಾಡಿದರೆ ದೇಹ ವರ್ಕೌಟ್‌ಗೆ ಸಿದ್ಧವಾಗುತ್ತದೆ. ಇದರಿಂದ ಮಸಲ್ ಸ್ಟಿಫ್‌ನೆಸ್ ಮತ್ತು ಇಂಜುರಿ ಸಾಧ್ಯತೆ ಕಡಿಮೆಯಾಗುತ್ತದೆ.
ಡಯಟ್ ಕೂಡ ಅಷ್ಟೇ ಮುಖ್ಯ
ಜಿಮ್ ಮಾತ್ರ ಸಾಕಾಗುವುದಿಲ್ಲ. ಸರಿಯಾದ ಪ್ರೋಟೀನ್, ನೀರು ಮತ್ತು ಸಮತೋಲನ ಆಹಾರ ಇಲ್ಲದೆ ಉತ್ತಮ ಫಲಿತಾಂಶ ಕಾಣಿಸುವುದಿಲ್ಲ.
ನಿರಂತರತೆ ಇರಲಿ
ಒಂದು ಅಥವಾ ಎರಡು ದಿನ ಮಾಡಿದರೆ ಫಲಿತಾಂಶ ಸಿಗುವುದಿಲ್ಲ. ವಾರದಲ್ಲಿ ಕನಿಷ್ಠ 4–5 ದಿನ ನಿಯಮಿತವಾಗಿ ಮಾಡಿದರೆ ಮಾತ್ರ ಬದಲಾವಣೆ ಕಾಣಲು ಆರಂಭವಾಗುತ್ತದೆ.



