ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರಿನ ಅಭಿಮಾನಿಗಳ ಮುಂದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಪಂದ್ಯ ಆರಂಭವಾದ ಕ್ಷಣದಿಂದಲೇ ಆಘಾತದ ಮೇಲೆ ಆಘಾತ ಎದುರಾಯಿತು. ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಮೂಲಕ ಟಾಪ್ ಆರ್ಡರ್‌ನ್ನು ಕಂಗೆಡಿಸಿ, ಎಸ್‌ಆರ್‌ಎಚ್ ತಂಡವನ್ನು ಕೇವಲ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಳ್ಳುವ ಸ್ಥಿತಿಗೆ ತಳ್ಳಿದರು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಲಕ್ನೋ ನಿರ್ಧಾರ ಆರಂಭದಲ್ಲೇ ಫಲ ನೀಡಿತು. ಮೊಹಮ್ಮದ್ ಶಮಿ ತಮ್ಮ ಮೊದಲ ಓವರ್‌ನಲ್ಲೇ ಅಭಿಷೇಕ್ ಶರ್ಮಾ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಕಳುಹಿಸಿದರು. ಕೇವಲ 1 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಹೈದರಾಬಾದ್‌ಗೆ ಮತ್ತೊಂದು ಶಾಕ್ ಮೂರನೇ ಓವರ್‌ನಲ್ಲಿ ಎದುರಾಯಿತು. ಅದೇ ಶಮಿ, ಟ್ರಾವಿಸ್ ಹೆಡ್ ವಿಕೆಟ್ ಪಡೆದು ತಂಡವನ್ನು 8 ರನ್‌ಗೆ 2 ವಿಕೆಟ್ ಸ್ಥಿತಿಗೆ ತಳ್ಳಿದರು.
ಇದನ್ನೂ ಓದಿ:
ನಂತರ ಪ್ರಿನ್ಸ್ ಯಾದವ್ ಬೌಲಿಂಗ್‌ಗೆ ಬಂದು ನಾಯಕ ಇಶಾನ್ ಕಿಶನ್ ಅವರನ್ನು ಕೇವಲ 1 ರನ್‌ಗೆ ಕ್ಲೀನ್ ಬೌಲ್ಡ್ ಮಾಡಿದರು. ಲಿವಿಂಗ್‌ಸ್ಟೋನ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದೇ 14 ರನ್‌ಗೆ ಔಟಾದರು. ಈ ಮೂಲಕ ಸನ್‌ರೈಸರ್ಸ್ 26 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಭಾರೀ ಒತ್ತಡಕ್ಕೆ ಸಿಲುಕಿತು.
ಆದರೆ ಮಧ್ಯ ಕ್ರಮಾಂಕದಲ್ಲಿ ಹೈನ್‌ರಿಚ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಂಡವನ್ನು ಮರುಸ್ಥಾಪಿಸಲು ಹೋರಾಟ ಮುಂದುವರಿಸಿದ್ದಾರೆ. ಆರಂಭಿಕ ಆಘಾತದ ಬಳಿಕ ಪಂದ್ಯದಲ್ಲಿ ಲಕ್ನೋ ಸ್ಪಷ್ಟ ಮೇಲುಗೈ ಸಾಧಿಸಿದೆ.



