April 6, 2026
Monday, April 6, 2026
spot_img

Muscle Strain | ಮಸಲ್ ಸ್ಟ್ರೈನ್ ಆಗೋದು ಯಾಕೆ? ಇದಕ್ಕೆ ಪರಿಹಾರ ಏನು?

ಒಮ್ಮೆ ಜಿಮ್ ಮಾಡಿದ ನಂತರ ಕೈ, ಭುಜ, ಕಾಲು ಅಥವಾ ಬೆನ್ನಿನ ಸ್ನಾಯುಗಳಲ್ಲಿ ಎಳೆತದಂತೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಕೈ ಚಲಿಸುವಾಗ ಸೆಳೆತ, ಬಿಗಿತ ಅಥವಾ ಒತ್ತಡದ ಅನುಭವವಾಗಬಹುದು. ಇದನ್ನೇ ಸಾಮಾನ್ಯವಾಗಿ ಮಸಲ್ ಸ್ಟ್ರೈನ್ ಎಂದು ಕರೆಯುತ್ತಾರೆ. ಸ್ನಾಯುಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿದಾಗ ಅಥವಾ ಅಚಾನಕ್ ಒತ್ತಡ ಬಂದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸರಿಯಾದ ವಿಶ್ರಾಂತಿ ಮತ್ತು ಸಣ್ಣ ಜಾಗ್ರತೆ ತೆಗೆದುಕೊಂಡರೆ ಇದು ಬೇಗ ಗುಣವಾಗುತ್ತದೆ.

ಅತಿಯಾಗಿ ವರ್ಕೌಟ್ ಮಾಡುವುದು
ದೇಹಕ್ಕೆ ಹೊಂದುವ ಮಟ್ಟಕ್ಕಿಂತ ಹೆಚ್ಚು ತೂಕ ಎತ್ತುವುದು ಅಥವಾ ಒಂದೇ ಮಸಲ್ ಗ್ರೂಪ್ ಅನ್ನು ಪದೇಪದೇ ತರಬೇತಿ ಮಾಡುವುದು strain ಗೆ ಕಾರಣವಾಗುತ್ತದೆ. ಉದಾಹರಣೆಗೆ triceps, shoulder ಅಥವಾ back workout ನಂತರ ಕೈಯಲ್ಲಿ strain ಆಗಬಹುದು.

Warm-up ಮಾಡದೇ ವ್ಯಾಯಾಮ ಆರಂಭಿಸುವುದು
ವ್ಯಾಯಾಮಕ್ಕೆ ಮೊದಲು ಮಸಲ್ ಅನ್ನು warm-up ಮಾಡದೇ ಇದ್ದರೆ ಸ್ನಾಯುಗಳು ಗಟ್ಟಿಯಾಗಿರುತ್ತವೆ. ಇದರಿಂದ sudden movement ವೇಳೆ strain ಆಗುವ ಸಾಧ್ಯತೆ ಹೆಚ್ಚುತ್ತದೆ.

ಇದನ್ನೂ ಓದಿ:

ನೀರಿನ ಕೊರತೆ ಮತ್ತು electrolytes imbalance
ದೇಹದಲ್ಲಿ ನೀರು ಕಡಿಮೆ ಇದ್ದರೆ ಮಸಲ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ stiffness, tightness ಮತ್ತು strain ಅನುಭವವಾಗಬಹುದು.

ತಪ್ಪಾದ ಭಂಗಿ ಅಥವಾ sleeping position
ಕೆಲಸ ಮಾಡುವಾಗ ಲ್ಯಾಪ್ಟಾಪ್ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಒಂದು ಬದಿಯಲ್ಲಿ ಮಲಗುವುದು ಅಥವಾ ಕೈಗೆ ಒತ್ತಡ ಬರುವ ರೀತಿಯಲ್ಲಿ ಮಲಗುವುದು ಕೂಡ strain ಗೆ ಕಾರಣವಾಗಬಹುದು.

ಸರಿಯಾದ ಪ್ರೋಟೀನ್ ಮತ್ತು ರಿಕವರಿ ಕೊರತೆ
Workout ನಂತರ muscles repair ಆಗಲು protein ಮತ್ತು rest ಬಹಳ ಮುಖ್ಯ. ಸಾಕಷ್ಟು protein ತಿನ್ನದೇ ಇದ್ದರೆ ರಿಕವರಿ ನಿಧಾನವಾಗುತ್ತದೆ.

ಪರಿಹಾರ ಏನು?

  • ಮೊದಲ 24–48 ಗಂಟೆಗಳ ಕಾಲ ಸಂಪೂರ್ಣ ವಿಶ್ರಾಂತಿ ನೀಡಿ
  • ದಿನಕ್ಕೆ 3–4 ಬಾರಿ ತಣ್ಣನೆಯ ಐಸ್ ಪ್ಯಾಕ್ ಹಾಕುವುದರಿಂದ ನೋವು ಮತ್ತು ಊತ ಕಡಿಮೆಯಾಗಲು ಸಹಾಯವಾಗುತ್ತದೆ.
  • ನೋವು ಹೆಚ್ಚು ಇದ್ದರೆ ಲೈಟ್ ಕಂಪ್ರೆಶನ್ ಬ್ಯಾಂಡೇಜ್ ಬಳಸಿ
  • ಜಿಮ್‌ನಲ್ಲಿ ತೂಕ ಎತ್ತುವುದು ಅಥವಾ strain ಆಗಿರುವ ಮಸಲ್ ಮೇಲೆ ಒತ್ತಡ ಬರುವ ವ್ಯಾಯಾಮಗಳನ್ನು ಕೆಲವು ದಿನಗಳ ಕಾಲ ಮಾಡಬೇಡಿ.
  • ಮೊಟ್ಟೆ, ಪನೀರ್, ಮೊಸರು, ಬೇಳೆ ಪದಾರ್ಥಗಳು ಮಸಲ್ recoveryಗೆ ಸಹಾಯ ಮಾಡುತ್ತವೆ.
  • ಸ್ನಾಯುಗಳು ಮತ್ತೆ ಸಡಿಲವಾಗಲು ನಿಧಾನವಾಗಿ stretching exercises ಮಾಡಬಹುದು.

ಯಾವಾಗ ಡಾಕ್ಟರ್ ನನ್ನು ನೋಡಬೇಕು?
ತೀವ್ರ ನೋವು, swelling, numbness, ಕೈ ಚಲಿಸಲು ಆಗದಿರುವುದು ಅಥವಾ 5–7 ದಿನಗಳಾದರೂ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !