May 31, 2026
Sunday, May 31, 2026
spot_img

Gold Rate | ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಈ ಹಾವು ಏಣಿ ಆಟ ಮುಗಿಯೋ ಸೂಚನೆ ಇಲ್ಲ ಅನ್ಸುತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನದ ಬೆಲೆಗಳು ದಿನದಿಂದ ದಿನಕ್ಕೆ ಏರಿಳಿತದ ಆಟವಾಡುತ್ತಿದ್ದು, ಮಂಗಳವಾರವೂ ಸ್ವಲ್ಪ ಮಟ್ಟಿನ ಇಳಿಕೆ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ತೀವ್ರ ಅಸ್ಥಿರತೆ ಕಂಡುಬಂದಿದ್ದ ಬೆಲೆಗಳು ಇಂದು ಮತ್ತೆ ಸ್ವಲ್ಪ ಕಡಿಮೆಯಾಗಿದ್ದು, ಖರೀದಿದಾರರ ಗಮನ ಸೆಳೆಯುತ್ತಿದೆ.

ಇಂದು ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,065 ರೂ ಆಗಿದ್ದು, 10 ಗ್ರಾಂಗೆ 1,50,650 ರೂ ಇದೆ. 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 13,809 ರೂ ಆಗಿದ್ದು, 10 ಗ್ರಾಂಗೆ 1,38,090 ರೂಗೆ ಮಾರಾಟವಾಗುತ್ತಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,298 ರೂ ಎಂದು ದಾಖಲಾಗಿದೆ. ನಿನ್ನೆ ಹೋಲಿಸಿದರೆ ಪ್ರತಿ ಗ್ರಾಂಗೆ 1ರೂನಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ:

ಬೆಳ್ಳಿ ದರದಲ್ಲೂ ಸ್ವಲ್ಪ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 249.90 ರೂ ಇದ್ದು, 100 ಗ್ರಾಂಗೆ 24,990 ರೂ ಮತ್ತು ಒಂದು ಕಿಲೋಗೆ 2,49,900 ರೂ ಆಗಿದೆ. ಬೆಳ್ಳಿ ದರದಲ್ಲಿಯೂ 100ರೂ ನಷ್ಟು ಸಣ್ಣ ಇಳಿಕೆ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !