April 8, 2026
Wednesday, April 8, 2026
spot_img

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಮತದಾನಕ್ಕೆ ಕ್ಷಣಗಣನೆ, ಅಧಿಕಾರಿಗಳಿಂದ ಅಂತಿಮ ಸಿದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಚುನಾವಣೆ ಅಧಿಕಾರಿಗಳು ಕೊನೆಯ ಹಂತದ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ.

ನಾಳೆ ಬಿಗಿ ಪೊಲೀಸ್​ ಭದ್ರತೆಯಲ್ಲಿ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯವರೆೆಗೆ ಮತದಾನ ಮಾಡಲು ಅವಕಾಶವಿದೆ .

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ. ಬಿಜೆಪಿಯಿಂದ ವೀರಣ್ಣ ಚರಂತಿ ಮಠ, ಕಾಂಗ್ರೆಸ್ ನಿಂದ ಉಮೇಶ್ ಮೇಟಿ ಕಣದಲ್ಲಿದ್ದಾರೆ. ಒಟ್ಟು 2,59,797 ಮತದಾರರಿದ್ದು, ಪುರುಷರು 1,26,999, ಮಹಿಳೆಯರು1,32,775, ಇತರರು23 . ಇನ್ನು ಅಂಚೆ ಮತದಾರರು 170 ಮಂದಿ ಇದ್ದಾರೆ. ಒಟ್ಟು 332 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, 1,564 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಯುವ ಮತದಾನ ಕೇಂದ್ರ ಮತ್ತು ಮಹಿಳೆಯರಿಗಾಗಿ ಎರಡು ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಮತಗಟ್ಟೆ ಸುತ್ತ ಹೆಚ್ಚಿನ ಭದ್ರತೆ ಪೊಲೀಸರನ್ನು ನಿಯೋಜಿಸಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ನಡೆಸಿದ್ದು, ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ನಿಂದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಟಿ ಶ್ರೀನಿವಾಸ ದಾಸ ಕರಿಯಪ್ಪ ಹಾಗೂ ಎಸ್‌ಡಿಪಿಐ ಯಿಂದ ಅಫ್ಸರ್ ಕೊಡ್ಲಿಪೇಟೆ ಸ್ಪರ್ಧಿಸುತ್ತಿದ್ದಾರೆ. ಒಟ್ಟು 284 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, 1,489 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟು 2,31,683 ಮತದಾರರಿದ್ದು, ಪುರುಷರು 1,13,654 ಮಹಿಳಾ ಮತದಾರರು 1.17,986 , ಇತರೆ 43 ಮಂದಿ ಇದ್ದಾರೆ.

ಈ ಬಾರಿ ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆ ಮತ್ತು ಬಿಜೆಪಿ ಸವಾಲಿನ ಪ್ರಶ್ನೆ ಎದುರಾಗಿದ್ದು, ಯಾರಿಗೆ ಒಲಿಯಲಿದೆ ಗೆಲುವಿನ ಅದೃಷ್ಟ ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !