August 25, 2026
Tuesday, August 25, 2026
spot_img

ಸದ್ದೇ ಇಲ್ಲದಂತೆ ಜ್ಯೂಸ್‌ ಬಾಟಲಿಗೆ ವಿಷ ಬೆರೆಸಿ ಕುಡಿದ ಅಜ್ಜ-ಅಜ್ಜಿ, ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೃದ್ಧ ದಂಪತಿ ಜ್ಯೂಸ್‌ ಬಾಟಲಿಗೆ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

ಈಶ್ವರ್‌ ಆಚಾರ್ಯ ಹಾಗೂ ಗೌರಿ ಮೃತ ವೃದ್ಧರು. ಇಬ್ಬರೂ ಕೆಲವು ವರ್ಷಗಳಿಂದ ಬಿಪಿ ಹಾಗೂ ಶುಗರ್‌ನಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿತ್ತು. ಈ ಬೇಸರದಿಂದ ಗಂಡ ಹೆಂಡತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಸ್ಥಳಕ್ಕೆ ಬಸವೇಶ್ವರ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶಿಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !