ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡುವ ಸಂಬಂಧ ವಯೋಮಿತಿ ಸಡಿಲಿಕೆ ಮಾಡಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2026 ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ, ಒಟ್ಟು 60 ದಿನಗಳು ವಿನಾಯಿತಿ ನೀಡಿದ್ದು, 5 ವರ್ಷ 10 ತಿಂಗಳು ಪೂರ್ಣಗೊಂಡಿದರೆ ಪ್ರವೇಶ ಸಿಗಲಿದೆ.
ಈ ಹಿಂದೆ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಆರು ವರ್ಷ ಪೂರ್ಣವಾಗಿರಬೇಕಿತ್ತು. ಆದರೆ ಈ ಬಾರಿ ಪೋಷಕರ ಒತ್ತಡಕ್ಕೆ ಮಣಿದು ಶಿಕ್ಷಣ ಸಚಿವ ಮಧು ಬಂಗಾರಪ್ಪ 2 ತಿಂಗಳ ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದ್ದರು. ಸದ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇನ್ನು ಆದೇಶದಲ್ಲಿ ಈ ವರ್ಷಕ್ಕೆ ಮಾತ್ರ ಅನ್ವಯ ಎಂಬ ನಿಯಮ ವಿಧಿಸಲಾಗಿದೆ.
2020 ಮೇ 31ರೊಳಗೆ ಜನಿಸಿದ ಮಕ್ಕಳಿಗೆ ಮಾತ್ರ ಪ್ರಸಕ್ತ ಸಾಲಿನಲ್ಲಿ 1 ನೇ ತರಗತಿಗೆ ಅವಕಾಶವಿತ್ತು. ಹೊಸ ನಿಯಮದ ಪ್ರಕಾರ, 2020 ಜುಲೈ 30 ವರೊಳಗೆ ಜನಿಸಿದ ಮಕ್ಕಳಿಗೂ ದಾಖಲಾತಿ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ SATS ತಂತ್ರಾಂಶದಲ್ಲಿಯೂ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.



