October 31, 2026
Saturday, October 31, 2026
spot_img

ಪಡಿತರ ಅಕ್ಕಿ ಅಕ್ರಮ ಸಾಗಾಟ: ಲಾರಿ ಸಮೇತ 11 ಟನ್‌ಗೂ ಅಧಿಕ ಅಕ್ಕಿ ವಶ

ಹೊಸದಿಗಂತ ವರದಿ ಬೆಳಗಾವಿ:

ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಿಸಲು ನೀಡಲಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಮೇಲೆ ಮಾಳಮಾರುತಿ ಪೊಲೀಸರು ದಾಳಿ ನಡೆಸಿ, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್ 5ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಇಲಿಯಾಸ ಇಮಾಮಸಾಬ್ ಮುನಿಯಾರ್ ನೀಡಿದ ದೂರಿನ ಮೇರೆಗೆ ಆಜಾದ್ ನಗರದಲ್ಲಿರುವ ಇಂಡಿಯಾ ಗ್ಯಾರೇಜ್ ಬಳಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ 11,700 ಕೆ.ಜಿ. ಪಡಿತರ ಅಕ್ಕಿ ತುಂಬಿದ್ದ ಲಾರಿ ಪತ್ತೆಯಾಗಿದೆ.

ಲಾರಿ ಚಾಲಕ ವಿಜಯ ನಾರಾಯಣ ಭೋಸಲೆ (ವಡಗಾವಿ, ಪನಗರಿ, ಸಾತಾರ ಜಿಲ್ಲೆ) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಕಿಯ ಅಂದಾಜು ಮೌಲ್ಯ ₹2.63 ಲಕ್ಷ ಹಾಗೂ ಲಾರಿಯ ಮೌಲ್ಯ ₹6 ಲಕ್ಷ ಸೇರಿದಂತೆ ಒಟ್ಟು ₹8.63 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:

ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read