September 14, 2026
Monday, September 14, 2026
spot_img

ಝಾಂಬಿ ಡ್ರಗ್‌ ಅನ್ನೋದೇ ಇಲ್ಲ, ಯಾರೂ ಭಯಪಡೋ ಅವಶ್ಯ ಇಲ್ಲ: ಪರಮೇಶ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ಝಾಂಬಿ ಡ್ರಗ್ಸ್‌ ವದಂತಿ ಎಲ್ಲೆಡೆ ಹರಿದಾಡುತ್ತಿದ್ದು, ಜನ ಭಯಪಡುತ್ತಿದ್ದಾರೆ. ಆದರೆ ಝಾಂಬಿ ಡ್ರಗ್ಸ್‌ ಅನ್ನೋದೇ ಇಲ್ಲ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಝಾಂಬಿ ಡ್ರಗ್ ಇದೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆನ್ನುಬಿದ್ದ ಸಿಸಿಬಿ ಪೊಲೀಸರು, ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಬಿ ಡಿಸಿಪಿ ಕಾಸಿಂ ಸಾಬ್ ಮೇಲುಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ ವ್ಯಕ್ತಿಯನ್ನ ಬಾಗಲೂರು ಪೊಲೀಸರ ಬಂಧಿಸಿದ್ದಾರೆ. ಹೇಮಂತ್‌ ಬಂಧಿತ ಆರೋಪಿ.

ಆತ ಪಂಜಾಬ್‌ ಮೂಲದ ವ್ಯಕ್ತಿಯಾಗಿದ್ದು, ಕುಡಿಯುವ ಅಭ್ಯಾಸ ಇದೆ. ಕುಡಿತದಿಂದ ನಿಂತಲ್ಲೇ ನಿಂತಿದ್ದಾರೆ. ಝಾಂಬಿ ಗೀಂಬಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !