October 9, 2026
Friday, October 9, 2026
spot_img

ಮೈಸೂರು ಅರಮನೆ ಅಂಗಳಕ್ಕೆ ಕಾಲಿಟ್ಟ ಎರಡನೇ ಹಂತದ ಗಜಪಡೆ: ಯಾರ್ಯಾರಿದ್ದಾರೆ ಈ ಟೀಮ್ ನಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರು ಕಾಯುತ್ತಿರೋ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಎರಡನೇ ಹಂತದಲ್ಲಿ ಮೂರು ದಸರಾ ಆನೆಗಳು ಅರಮನೆಯ ಅಂಗಳ ತಲುಪಿವೆ.

ಟೀಮ್ ನಲ್ಲಿ ಯಾರೆಲ್ಲ ಇದ್ದಾರೆ ನೋಡಿ

ಎರಡನೇ ಹಂತದಲ್ಲಿ ರೂಪಾ, ಚೈತ್ರಾ ಹಾಗೂ ಸುಗ್ರೀವ ಆನೆಗಳಿಗೆ ಜಯಮಾರ್ಥಾಂಡ ದ್ವಾರದ ಬಳಿ ಮಂಗಳವಾದ್ಯಗಳೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಷ್ಟೇ ಅಲ್ಲದೆ ಆನೆಗಳಿಗೆ ಹೂವಿನ ಗೌರವ ಸಲ್ಲಿಸಿ ಕಬ್ಬು, ಹಣ್ಣುಗಳು ಹಾಗೂ ಚಕ್ಕುಲಿ, ಕಜ್ಜಾಯ, ಕೋಡುಬಳೆ, ಕರ್ಜಿಕಾಯಿ ಸೇರಿದಂತೆ ವಿವಿಧ ತಿನಿಸುಗಳನ್ನು ನೀಡಲಾಯಿತು.

ಇದನ್ನೂ ಓದಿ:

45 ವರ್ಷದ ರೂಪಾ ದೊಡ್ಡಹರವೆ ಶಿಬಿರದಿಂದ ಆಗಮಿಸಿದ್ದು, 55 ವರ್ಷದ ಚೈತ್ರಾ ಬಂಡೀಪುರದ ರಾಮಾಪುರ ಶಿಬಿರದಿಂದ ಹಾಗೂ 44 ವರ್ಷದ ಸುಗ್ರೀವ ದುಬಾರೆ ಶಿಬಿರದಿಂದ ಆಗಮಿಸಿದ್ದಾನೆ.

ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಆಗಮಿಸಿದ್ದವು. ಇದೀಗ ಒಟ್ಟು 12 ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಕೆಲವು ಗಂಡಾನೆಗಳಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಸೇರಿದಂತೆ ಒಟ್ಟು 1,000 ಕೆ.ಜಿ. ಭಾರ ಹೊರುವ ತರಬೇತಿ ನೀಡಲಾಗುತ್ತಿದೆ.

Must Read