May 31, 2026
Sunday, May 31, 2026
spot_img

ಇನ್ಮುಂದೆ ಬುಕ್‌ ಮಾಡಿದ ದಿನವೇ ಮನೆಬಾಗಿಲಿಗೆ ಬರಲಿದ್ಯಾ ಗ್ಯಾಸ್‌ ಸಿಲಿಂಡರ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಮುಗಿಯೋ ಟೈಮ್‌ ಬಂದಂತಿದೆ. ಈ ಸಮಸ್ಯೆಗೆ ಪರಿಹಾರ ಹುಡುಕೋಕೆ ಹೊರಟಿರುವ ಸರ್ಕಾರ 26 ದಿನಗಳ ಬಳಿಕ ಸಿಲಿಂಡರ್ ಬುಕ್ ಮಾಡಿದ್ರೆ ತಕ್ಷಣವೇ ವಿತರಿಸುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಿದೆ.

ಗ್ಯಾಸ್‌ ಏಜೆನ್ಸಿಗಳ ಮುಂದೆ ಜನ ಜಮಾಯಿಸುತ್ತಿದ್ದು, ಇದರ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಜನ ಗ್ಯಾಸ್‌ ಏಜೆನ್ಸಿಯ ಮುಂದೆ ಕ್ಯೂ ನಿಂತಿದ್ದರು. ಆದರೆ ಇನ್ಮುಂದೆ ಈ ರೀತಿ ಯಾರೂ ಮಾಡಬೇಡಿ. ಸಿಲಿಂಡರ್‌ ನಿಮ್ಮ ಮನೆಯ ಮುಂದೆಯೇ ಬರಲಿದೆ. ಅದು ಕೂಡ ನೀವು ಬುಕ್‌ ಮಾಡಿದ ದಿನವೇ ಎಂದು ಸರ್ಕಾರ ಹೇಳಿದೆ.

ಈ ನಿರ್ಣಯದಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !