April 11, 2026
Saturday, April 11, 2026
spot_img

ಅರ್ಷದೀಪ್ ಆಟ ‘ಉಲ್ಟಾ-ಪಲ್ಟಾ’: ವಿಕೆಟ್ ಏನೋ ಸಿಕ್ತು, ಆದ್ರೆ ರನ್ ಮಳೆ ಮಾತ್ರ ನಿಲ್ತಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಟಿ20 ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಪಾಲಿಗೆ ಈ ಬಾರಿಯ ಐಪಿಎಲ್ ಅಕ್ಷರಶಃ ಪರೀಕ್ಷಾ ಕಾಲದಂತಿದೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಇವರು, ಆರಂಭಿಕ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ತಿಣುಕಾಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಗೂ ವಿಕೆಟ್ ಖಾತೆ ತೆರೆದರಾದರೂ, ರನ್ ಬಿಟ್ಟುಕೊಡುವಲ್ಲಿ ಮಾತ್ರ ಜಿಪುಣತನ ತೋರಲಿಲ್ಲ.

4 ಓವರ್‌ಗಳಲ್ಲಿ ಬರೋಬ್ಬರಿ 50 ರನ್ ಬಿಟ್ಟುಕೊಟ್ಟ ಅರ್ಷದೀಪ್, ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತರಾದರು.

ಒಂದೇ ಓವರ್‌ನಲ್ಲಿ ಅರ್ಷದೀಪ್ 24 ರನ್ ಚಚ್ಚಿಸಿಕೊಂಡರು. ಇದರಲ್ಲಿ ಅಭಿಷೇಕ್ ಶರ್ಮಾ ಬ್ಯಾಟ್‌ನಿಂದಲೇ 20 ರನ್ ಬಂದರೆ, ಉಳಿದ 4 ರನ್ ವೈಡ್ ರೂಪದಲ್ಲಿ ಬಂದವು.

ಇಶಾನ್ ಕಿಶನ್ ವಿಕೆಟ್ ಪಡೆಯಲು ಅರ್ಷದೀಪ್‌ಗೆ ನೆರವಾಗಿದ್ದು ಮಾರ್ಕೋ ಯಾನ್ಸನ್ ಅವರ ಅದ್ಭುತ ಕ್ಯಾಚ್. ಸುಮಾರು 15 ಮೀಟರ್ ಓಡಿ ಬಂದು ಒಂಟಿ ಕೈನಲ್ಲಿ ಹಿಡಿದ ಆ ಕ್ಯಾಚ್ ಪಂದ್ಯದ ಹೈಲೈಟ್ ಆಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !