ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 18ನೇ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಓಪನರ್ ಸಂಜು ಸ್ಯಾಮ್ಸನ್ ಅಕ್ಷರಶಃ ಅಬ್ಬರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಸಂಜು, ತವರು ಮೈದಾನ ಚೆಪಾಕ್‌ನಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದಿದ್ದಾರೆ.
ಮೊದಲಿಗೆ ಎಚ್ಚರಿಕೆಯ ಆಟವಾಡಿದ ಅವರು ಅರ್ಧಶತಕ ಪೂರೈಸಿದರು. ಒಮ್ಮೆ ಕ್ರೀಸ್‌ನಲ್ಲಿ ನೆಲೆಯೂರಿದ ನಂತರ ಡೆಲ್ಲಿ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ ಸ್ಯಾಮ್ಸನ್, ಭರ್ಜರಿ ಶತಕ ಬಾರಿಸಿ ಸಂಭ್ರಮಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಅವರ 4ನೇ ಶತಕವಾಗಿದ್ದರೆ, ಸಿಎಸ್‌ಕೆ ಪರ ಆಡಿದ ಮೊದಲ ಶತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಸಂಜು ಸ್ಯಾಮ್ಸನ್ ತಾವು ಫಾರ್ಮ್‌ಗೆ ಮರಳಿರುವುದನ್ನು ರಾಜಾರೋಷವಾಗಿ ಸಾರಿದ್ದಾರೆ.



