ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಅಬ್ಬರಕ್ಕೆ ಎಡವಿದ ಲಖನೌ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 164 ರನ್ಗಳ ಸಾಧಾರಣ ಮೊತ್ತ ಗಳಿಸಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ತಂಡ ಉತ್ತಮ ಆರಂಭ ಸಿಗಲಿಲ್ಲ. ಮಿಚೆಲ್ ಮಾರ್ಷ್11 ರನ್ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ನಾಯಕ ರಿಷಭ್ ಪಂತ್ 18 ರನ್ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ತೆವಾಟಿಯಾಗೆ ಕ್ಯಾಚ್ ನೀಡಿ ಔಟ್ ಆದರು.
ಮತ್ತೊಂದೆಡೆ 30 ರನ್ಗಳಿಸಿದ್ದ ಐಡೆನ್ ಮಾರ್ಕ್ರಮ್ ವಾಷಿಂಗ್ಟನ್ ಸುಂದರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 9 ರನ್ಗಳಿಸಿದ್ದ ಆಯುಷ್ ಬದೋನಿ ಕೂಡ ಪೆವಿಲಿಯನ್ ನತ್ತ ಮುಖಮಾಡಿದರು. ಪೂರನ್ 18 ರನ್ಗಳಿಸಿ ಪ್ರಸಿದ್ಧ್ ಕೃಷ್ಣಗೆ 3ನೇ ಬಲಿಯಾದರು.
ಅಬ್ದುಲ್ ಸಮದ್ 18 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಲಖನೌ ಗೆಲುವಿನ ರೂವಾರಿಮುಕುಲ್ ಚೌಧರಿ 18 ರನ್ಗಳಿಸಿ ಕೃಷ್ಣ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿದರು.
ಪ್ರಸಿದ್ಧ್ ಕೃಷ್ಣ 4 ಓವರ್ಗಳಲ್ಲಿ ಕೇವಲ 28 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ಗಳನ್ನು ಕಬಳಿಸಿದರು.



