ಹೊಸದಿಗಂತ ಡಿಜಿಟಲ್ ಡೆಸ್ಕ್
ವಾಂಖೆಡೆ ಕ್ರೀಡಾಂಗಣದಲ್ಲಿ ಫಿಲ್ ಸಾಲ್ಟ್, ಕೊಹ್ಲಿ, ರಜತ್ ಪಾಟೀದಾರ್ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಬೌಲರ್ಸ್ ಗಳು ಸುಸ್ತಾಗಿದ್ದು, ಆರ್ಸಿಬಿ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 240 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ಫಿಲ್ ಸಾಲ್ಟ್, ಕೊಹ್ಲಿ 120 ರನ್ಗಳ ಭರ್ಜರಿ ಜೊತೆಯಾಟ ನೀಡಿದರು. ಫಿಲ್ ಸಾಲ್ಟ್ ಇಂದು 36 ಎಸೆತಗಳಲ್ಲಿ 78 ರನ್ಗಳಿಸಿದರು.
ಸಾಲ್ಟ್ ಔಟಾದ ಬಳಿಕ ಬಂದ ನಾಯಕ ರಜತ್ ಪಾಟೀದಾರ್ ಕೊಹ್ಲಿ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು, 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 23 ಎಸೆತಗಳಲ್ಲಿ 65 ರನ್ಗಳ ಜೊತೆಯಾಟ ನಡೆಸಿದರು.
ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ಗಳಿಸಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿ ಔಟ್ ಆದರು. ಕೊಹ್ಲಿ ಬೆನ್ನಲ್ಲೇ ಪಾಟೀದಾರ್ ಕೂಡ 20 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಿತ 53 ರನ್ಗಳಿಸಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು.
ಬಳಿಕ ಟಿಮ್ ಡೇವಿಡ್ ಕೊನೆಯ 4 ಓವರ್ಗಳಲ್ಲಿ ಅಬ್ಬರಿದ್ದು,16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 34 ರನ್ಗಳಿಸಿದರು. ಈ ಮೂಲಕ ಮುಂಬೈ ಗೆಲುವಿಗೆ ಬೃಹತ್ ಟಾರ್ಗೆಟ್ ನೀಡಿದೆ.



