July 23, 2026
Thursday, July 23, 2026
spot_img

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಾನಕೋಗಿಲೆ, ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.

ಬೆಳಿಗ್ಗೆ 11 ಗಂಟೆಗೆ ಭೋಸ್ಲೆ ಅವರು ವಾಸಿಸುತ್ತಿದ್ದ ಲೋವರ್ ಪರೇಲ್‌ನ ಕಾಸಾ ಗ್ರಾಂಡೆಯಲ್ಲಿ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಆಶಾ ಭೋಸ್ಲೆ ನಿನ್ನೆ ಮುಂಬೈ ಆಸ್ಪತ್ರೆಯಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಸಂಜೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎಂಟು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಆಶಾ ಭೋಸ್ಲೆ ಹಲವಾರು ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿದ್ದರು. ಅದ್ಭುತ ಕಂಠಸಿರಿಯಿಂದಾಗಿ ಹಿಂದಿ ಸಿನಿಮಾ ಲೋಕದಲ್ಲಿ ಮೇರು ಸ್ಥಾನ ಗಳಿಸಿದ್ದರು. ತಮ್ಮ ವೃತ್ತಿಜೀವನದ ಮೊದಲ ದಶಕದಲ್ಲಿ ಯಾವುದೇ ಇತರ ಹಿನ್ನೆಲೆ ಗಾಯಕರಿಗಿಂತಲೂ ಹೆಚ್ಚು ಹಾಡುಗಳನ್ನು ಹಾಡಿದವರು ಭೋಸ್ಲೆ ಎಂಬುದು ವಿಶೇಷ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !