April 15, 2026
Wednesday, April 15, 2026
spot_img

ಟ್ರಂಪ್ ಸುಂಕ ಬೆದರಿಕೆಗೆ ಚೀನಾ ತಿರುಗೇಟು: ನಮ್ಮ ವ್ಯವಹಾರಕ್ಕೆ ಯಾರ ಹಸ್ತಕ್ಷೇಪವೂ ಅಗತ್ಯವಿಲ್ಲ ಎಂದ ಡ್ರ್ಯಾಗನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಒಂದೆಡೆ ತಾರಕ್ಕೇರುತ್ತಿದ್ದು, ಇದರ ನಡುವೆ ಇರಾನ್ ಗೆ ಚೀನಾ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಡ್ರ್ಯಾಗನ್ ಖಡಕ್ ತಿರುಗೇಟು ನೀಡಿದ್ದು, ಇರಾನ್ ಜೊತೆಗಿನ ನಮ್ಮ ವ್ಯಾಪಾರ ಹಾಗೂ ತೈಲ ಸಂಬಂಧ ಸ್ಪಷ್ಟ ಎಂದು ತಿಳಿಸಿದೆ.

ಈ ಕುರಿತು ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಹೇಳಿಕೆ ನೀಡಿದ್ದು, ಪ್ರಸುತ ನಾವು ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಚೀನಾ ಶಾಂತಿಯನ್ನು ಬಯಸುವ ರಾಷ್ಟ್ರವಾಗಿದ್ದು , ಹಾರ್ಮುಜ್ ಜಲಸಂಧಿಯಲ್ಲಿ ನಮ್ಮ ಹಡಗುಗಳ ಸಂಚಾರ ಸಾಮಾನ್ಯ ರೀತಿಯಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಮ್ಮ ವ್ಯವಹಾರಗಳಲ್ಲಿ ಬೇರೆ ದೇಶಗಳು ಹಸ್ತಕ್ಷೇಪ ಮಾಡಬಾರದೆಂದು ನಾವು ಬಯಸುತ್ತೇವೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಇದೇ ವೇಳೆ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ ಎಂಬ ಟ್ರಂಪ್ ಆರೋಪವನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ತಳ್ಳಿಹಾಕಿದ್ದು, ಈ ವರದಿಗಳು ಸಂಪೂರ್ಣ ಆಧಾರರಹಿತವಾಗಿದೆ . ನಾವು ಅಂತಾರಾಷ್ಟ್ರೀಯ ರಫ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !