June 19, 2026
Friday, June 19, 2026
spot_img

Workout Guide | ಕಾರ್ಡಿಯೊ vs ಸ್ಟ್ರೆಂಥ್ ಟ್ರೈನಿಂಗ್‌ನಲ್ಲಿ ಯಾವುದು ಬೆಸ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಟ್ನೆಸ್ ಜರ್ನಿ ಶುರು ಮಾಡಿದಾಗ ಹಲವರಿಗೆ ಬರುವ ಮೊದಲ ಪ್ರಶ್ನೆ ಇದೇ ಕಾರ್ಡಿಯೊ ಮಾಡೋದೇ ಬೆಸ್ಟ್, ಅಥವಾ ಸ್ಟ್ರೆಂಥ್ ಟ್ರೈನಿಂಗ್ ಮಾಡ್ಬೇಕಾ? ನಿಜ ಹೇಳಬೇಕಾದರೆ, ಎರಡಕ್ಕೂ ತಮ್ಮದೇ ಆದ ಮಹತ್ವ ಇದೆ. ನಿಮ್ಮ ಗುರಿ ಏನು ಅನ್ನೋದರ ಮೇಲೆ ಯಾವುದು ಉತ್ತಮ ಅನ್ನೋದು ನಿರ್ಧಾರವಾಗುತ್ತದೆ.

ಕಾರ್ಡಿಯೊ ಏಕೆ ಮುಖ್ಯ?
ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಸ್ಕಿಪ್ಪಿಂಗ್ ಮುಂತಾದವು ಕಾರ್ಡಿಯೊ ವರ್ಕೌಟ್‌ಗಳು. ಇವು ಹೃದಯದ ಆರೋಗ್ಯವನ್ನು ಉತ್ತಮಗೊಳಿಸಿ, ಕ್ಯಾಲೊರಿಯನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತವೆ. ವಿಶೇಷವಾಗಿ ವೆಯಿಟ್ ಲಾಸ್ ಗುರಿ ಇದ್ದರೆ ಕಾರ್ಡಿಯೊ ಬೆಸ್ಟ್.

ಸ್ಟ್ರೆಂಥ್ ಟ್ರೈನಿಂಗ್‌ನ ಲಾಭ
ವೈಟ್ ಲಿಫ್ಟಿಂಗ್, ಸ್ಕ್ವಾಟ್ಸ್, ಪುಷ್‌ಅಪ್ಸ್, ಡಂಬೆಲ್ ವರ್ಕೌಟ್‌ಗಳು ಸ್ಟ್ರೆಂಥ್ ಟ್ರೈನಿಂಗ್‌ಗೆ ಸೇರುತ್ತವೆ. ಇದು ಮಸಲ್‌ಗಳನ್ನು ಬಲಪಡಿಸುವುದರ ಜೊತೆಗೆ ದೇಹದ ಮೆಟಾಬಾಲಿಸಂ ಹೆಚ್ಚಿಸುತ್ತದೆ. ಮಸಲ್ ಹೆಚ್ಚಿದಂತೆ ದೇಹ ವಿಶ್ರಾಂತಿಯಲ್ಲಿದ್ದರೂ ಹೆಚ್ಚು ಕ್ಯಾಲೊರಿ ಬರ್ನ್ ಆಗುತ್ತದೆ.

ಇದನ್ನೂ ಓದಿ:

ಹಾಗಾದ್ರೆ ಯಾವುದು ಬೆಸ್ಟ್?
ತೂಕ ಇಳಿಸಿಕೊಳ್ಳಲು ಕಾರ್ಡಿಯೊ ಮುಖ್ಯವಾದರೂ, ದೇಹ ಟೋನ್ ಆಗಿ ಫಿಟ್ ಕಾಣಲು ಸ್ಟ್ರೆಂಥ್ ಟ್ರೈನಿಂಗ್ ಅಗತ್ಯ. ಎರಡನ್ನೂ ಸೇರಿಸಿ ಮಾಡಿದಾಗ ಮಾತ್ರ ಬೆಸ್ಟ್ ಫಲಿತಾಂಶ ಸಿಗುತ್ತದೆ.

ಸರಿಯಾದ ಕಾಂಬಿನೇಷನ್
ವಾರದಲ್ಲಿ 3 ದಿನ ಕಾರ್ಡಿಯೊ, 2–3 ದಿನ ಸ್ಟ್ರೆಂಥ್ ಟ್ರೈನಿಂಗ್ ಮಾಡಿದರೆ ಫ್ಯಾಟ್ ಲಾಸ್ ಮತ್ತು ಮಸಲ್ ಬಿಲ್ಡ್ ಎರಡೂ ಸಾಧ್ಯ.

ಫಿಟ್ನೆಸ್‌ನಲ್ಲಿ ಒಂದೇ ವ್ಯಾಯಾಮವಲ್ಲ, ಬ್ಯಾಲೆನ್ಸ್‌ಡ್ ರೂಟೀನ್‌ ನಿಜವಾದ ಮಂತ್ರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !