July 24, 2026
Friday, July 24, 2026
spot_img

ಗುಮ್ಮಟ ನಗರಿಯಲ್ಲಿ ಗುಂಡಿನ ಸದ್ದು: ದುಷ್ಕರ್ಮಿಗಳಿಂದ ಗ್ರಾಪಂ ಸದಸ್ಯನ ಭೀಕರ ಹತ್ಯೆ

ಹೊಸದಿಗಂತ ವರದಿ, ವಿಜಯಪುರ:

ದುಷ್ಕರ್ಮಿಗಳ ಗುಂಡಿನ ದಾಳಿಗೆ ಗ್ರಾಪಂ ಸದಸ್ಯ ಭೀಕರವಾಗಿ ಸಾವಿಗೀಡಾದ ಘಟನೆ ಗುಮ್ಮಟ ನಗರ ಹೊರ ವಲಯ ಅಲಿಯಾಬಾದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಅಲಿಯಾಬಾದ ಗ್ರಾಪಂ ಸದಸ್ಯ, ಪಾಂಗರುನ ದೊಡ್ಡಿ ನಿವಾಸಿ ರಾಜು ಕರೆ (48) ಮೃತಪಟ್ಟ ವ್ಯಕ್ತಿ.

ರಾಜು ಕರೆ ತಮ್ಮ ಥಾರ್ ವಾಹನದಲ್ಲಿ ತೆರಳುತ್ತಿದ್ದಾಗ, ದುಷ್ಕರ್ಮಿಗಳು ಟಿಪ್ಪರ್ ಮೂಲಕ ಡಿಕ್ಕಿ ಹೊಡೆಸಿದ್ದು, ಬಳಿಕ ಜೀಪಿನ ಮೇಲೆ ಮನಬಂದಂತೆ 6 ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಜೀಪ್ ಡೋರ್ ಓಪನ್ ಆಗದಕ್ಕೆ ನಂತರ ಜೀಪಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ದುಷ್ಕರ್ಮಿಗಳ ಭೀಕರ ದಾಳಿಯಿಂದ ರಾಜು ಕರೆ ಥಾರ್ ಜೀಪಿನಲ್ಲಿಯೇ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಈ ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !