August 27, 2026
Thursday, August 27, 2026
spot_img

ಮಕ್ಕಳಿಗೆ ಅಶ್ಲೀಲ ವಿಡಿಯೋ ಕಳಿಸಿದ್ದೀರಿ ಎಂದು ಹೆದರಿಸಿ 31 ಲಕ್ಷ ರೂ. ವಂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಮ್ಮ ಹೆಸರಿನಲ್ಲಿ ಪಡೆದ ಹೊಸ ಸಿಮ್‌ನಿಂದ ಮಕ್ಕಳಿಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಕಳಿಸಲಾಗಿದೆ. ನಿಮ್ಮ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಹೇಳಿ ವೃದ್ಧರೊಬ್ಬರಿಗೆ ಬರೋಬ್ಬರಿ ₹31 ಲಕ್ಷ ಹಣ ವಂಚನೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಡಿಜಿಟಲ್‌ ಅರೆಸ್ಟ್‌ ಮಾಡಿದ ವ್ಯಕ್ತಿಯೊಬ್ಬ ತಾನು ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾದ ಅಧಿಕಾರಿ ಆರ್.ಕೆ. ಚೌಧರಿ ಎಂದು ಹೇಳಿದ್ದಾನೆ. ನಿಮ್ಮ ಹೆಸರಿನಲ್ಲಿರುವ ಸಿಮ್‌ನಿಂದ ಮಕ್ಕಳಿಗೆ ಕೆಟ್ಟ ಸಂದೇಶಗಳನ್ನು ಕಳಿಸಲಾಗಿದೆ. ಮುಂಬೈ ಸೈಬರ್‌ ಸೆಲ್‌ನೊಂದಿಗೆ ಮಾತನಾಡಿ ಎಂದು ಮತ್ತೊಬ್ಬರಿಗೆ ಕನೆಕ್ಟ್‌ ಮಾಡಿದ್ದಾರೆ. ನಿಮ್ಮ ಹೆಸರಿನಲ್ಲಿ ಎಫ್‌ಐಆರ್‌ ಆಗಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ದೂರು ದಾಖಲಾಗಿದೆ ಎಂದು ಹೆದರಿಸಿದ್ದಾರೆ. ನಂತರ ನಿಮ್ಮ ಹೆಸರಿನಲ್ಲಿ ವಾರೆಂಟ್‌ ಜಾರಿಯಾಗಿದೆ ಬೇಗ ಖಾತೆಯಲ್ಲಿರುವ ಹಣವನ್ನು ನಾವು ಕೊಡುವ ಖಾತೆಗೆ ಹಾಕಿ ಎಂದು ಗಾಬರಿಪಡಿಸಿದ್ದಾರೆ. ಆನಂತರ ತಮ್ಮ ಬಳಿ ಇದ್ದ ಮೂರು ಮುಕ್ಕಾಲು ಲಕ್ಷ ಹಾಗೂ ಮನೆಯಲ್ಲಿದ್ದ ಒಡವೆಯನ್ನೆಲ್ಲ ಅಡವಿಟ್ಟು ಬಾಕಿ ಹಣವನ್ನು ನೀಡಿದ್ದಾರೆ.

ಇಷ್ಟೆಲ್ಲಾ ಹಣವನ್ನು ನೀಡಿದ ನಂತರ ಸಂತ್ರಸ್ತರಿಗೆ ತಾವು ಮೋಸ ಹೋಗುತ್ತಿದ್ದೀವಿ ಎನಿಸಿದೆ. ತಕ್ಷಣವೇ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾವ ಅಧಿಕಾರಿಗಳ ಹೆಸರನ್ನು ಹೇಳಿಕೊಂಡು ಯಾರೇ ಕರೆ ಮಾಡಿದರೂ ಅವರು ಹೇಳಿದ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಡಿ. ತಕ್ಷಣವೇ ಸೈಬರ್‌ ಠಾಣೆಗೆ ಭೇಟಿ ನೀಡಿ ಕಂಪ್ಲೆಂಟ್‌ ದಾಖಲಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !