ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಸ್ಟಾರ್ ನಟ ರಾಮ್ ಚರಣ್ ಅವರ ಆಧ್ಯಾತ್ಮಿಕ ಜೀವನಶೈಲಿ ಮತ್ತೆ ಸುದ್ದಿಯಾಗಿದೆ. ಸಿನಿಮಾಗಳ ಬ್ಯುಸಿ ಶೆಡ್ಯೂಲ್ ನಡುವೆಯೂ ಅವರು ಅಯ್ಯಪ್ಪ ದೀಕ್ಷೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ವಿಚಾರ ಅಭಿಮಾನಿಗಳ ಗಮನ ಸೆಳೆದಿದೆ. ಇತ್ತೀಚಿನ ಸಂದರ್ಶನದಲ್ಲಿ ಅವರು ಈ ದೀಕ್ಷೆ ತನ್ನ ಜೀವನದ ಅವಿಭಾಜ್ಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಪ್ರತೀ ವರ್ಷ ಎರಡು ಬಾರಿ ಅಯ್ಯಪ್ಪ ಮಾಲೆ ಧರಿಸುವುದಾಗಿ ರಾಮ್ ಚರಣ್ ತಿಳಿಸಿದ್ದಾರೆ. ಪ್ರತಿ ಬಾರಿ 41 ದಿನಗಳ ಕಾಲ ಬರಿಗಾಲಿನಲ್ಲಿ ನಡೆಯುವುದು, ಕಪ್ಪು ವಸ್ತ್ರ ಧರಿಸುವುದು ಮತ್ತು ಸಾತ್ವಿಕ ಆಹಾರ ಸೇವಿಸುವುದು ಅವರ ನಿಯಮವಾಗಿದೆ. ಈ ವ್ರತವು ತಮ್ಮ ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಜೀವನದಲ್ಲಿ ಶಿಸ್ತನ್ನು ತರಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಈ ದೀಕ್ಷೆಯನ್ನು 17ನೇ ವಯಸ್ಸಿನಲ್ಲಿ ತಂದೆ ಚಿರಂಜೀವಿ ಅವರ ಸಲಹೆಯ ಮೇರೆಗೆ ಆರಂಭಿಸಿದ್ದಾಗಿ ರಾಮ್ ಚರಣ್ ತಿಳಿಸಿದ್ದಾರೆ. ‘ಇದು ನನ್ನ ಆಲೋಚನೆಗಳನ್ನು ನಿಯಂತ್ರಿಸಲು, ಅನಗತ್ಯ ವಿಚಾರಗಳಿಂದ ದೂರ ಇರಲು ನೆರವಾಗಿದೆ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ Esquire India ಮುಖಪುಟಕ್ಕಾಗಿ ನಡೆದ ಫೋಟೋಶೂಟ್ ಸಮಯದಲ್ಲೂ ಅವರು ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.



