ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಆನಂತರ ಜನರುನ್ನೇದಿಶಿಸಿ ಮಾತನಾಡಿದ್ದು, ಕರ್ನಾಟಕ ಹಾಗೂ ಕರ್ನಾಟಕದ ಊಟ ನನಗೆ ಇಷ್ಟ ಎಂದು ಹೇಳಿದ್ದಾರೆ.
ಇಲ್ಲಿ ರಾಗಿ ಮುದ್ದೆ ಜನಪ್ರಿಯವಾಗಿದೆ. ಅದು ಬರೀ ರುಚಿಯಾದ ಆಹಾರ ಅಲ್ಲ, ಆರೋಗ್ಯಕರವಾದ ಆಹಾರ. ಯುವಪೀಳಿಗೆ ಇದನ್ನು ಇಷ್ಟಪಟ್ಟು ತಿನ್ನೋದಿಲ್ಲ. ಆದರೆ ಇದರ ಮಹತ್ವ ಅರಿತು ಎಲ್ಲರೂ ಇದನ್ನು ಸೇವನೆ ಮಾಡಬೇಕು ಎಂದು ಹೇಳಿದ್ದಾರೆ.
ರಾಗಿ ಮುದ್ದೆಯನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಫೇಮಸ್ ಮಾಡಿದ್ದಾರೆ. ಈಗ ನಾರ್ತ್‌ನಲ್ಲಿಯೂ ರಾಗಿ ಮುದ್ದೆ ತಿನ್ನುತ್ತಾರೆ. ಇದರ ಜೊತೆ ನವಧಾನ್ಯಗಳ ಸೇವನೆ ಕೂಡ ಮಾಡಿ ಎಂದಿದ್ದಾರೆ.
ಕರ್ನಾಟಕಕ್ಕೆ ಬರುವುದೆಂದರೆ ನನಗೆ ಖುಷಿಯ ವಿಷಯ. ಇಲ್ಲಿಗೆ ಬಂದಾಗಲೆಲ್ಲಾ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಇನ್ನಷ್ಟು ಮಹತ್ವಪೂರ್ಣವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕರ್ನಾಟಕದ ಮಣ್ಣಿನ ಗುಣವನ್ನು ಬಣ್ಣಿಸಿದ ಪ್ರಧಾನಿ, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವಂತವಾಗಿರಿಸಿರುವ ಸಾಕ್ಷಾತ್ ರೂಪ ಎಂದರು.



