May 26, 2026
Tuesday, May 26, 2026
spot_img

ನನ್ನ ಮನಸ್ಸು ತುಂಬಿ ಬರುತ್ತಿದೆ, ಮಾತುಗಳೇ ಹೊರಗೆ ಬರುತ್ತಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಇಂದು ಆದಿಚುಂಚನಗಿರಿಯ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟನೆ ಮಾಡಿದ್ದಾರೆ. ನಂತರ ಬಂದಿದ್ದ ಜನರನ್ನುದ್ದೇಶಿಸಿ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಇಂದು ನನ್ನ ಮನಸ್ಸು ತುಂಬಿ ಬಂದಿದೆ, ನನಗಾಗುತ್ತಿರುವ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಶ್ರೀ ಕಾಲ ಭೈರವ ದೇವಾಲಯದಲ್ಲಿ ದರುಶನ ಮತ್ತು ಪೂಜೆಯನ್ನು ಕಣ್ತುಂಬಿಕೊಂಡಿದ್ದು, ಶ್ರೀ ಗುರು ಭೈರವೈಕ್ಯ ಮಂದಿರದ ಭವ್ಯ ಉದ್ಘಾಟನೆಯಲ್ಲಿ ಉಪಸ್ಥಿತರಿರುವುದು, ಐತಿಹಾಸಿಕ ಜ್ವಾಲಾ ಪೀಠದಲ್ಲಿ ಸಮಯ ಕಳೆಯುವುದು, ಆಧ್ಯಾತ್ಮಿಕ ಎತ್ತರವನ್ನು ತಲುಪಿದ ಸಂತರ ಸಹವಾಸವನ್ನು ಸ್ವೀಕರಿಸುವುದು ಮತ್ತು ಈಗ ಇಲ್ಲಿ ನೆರೆದಿರುವ ಸಾರ್ವಜನಿಕರ ದರ್ಶನ ಪಡೆಯುವುದು..

ಈ ಅನುಭವಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ನಿಮ್ಮೆಲ್ಲರ ನಡುವೆ ಬರಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !