October 10, 2026
Saturday, October 10, 2026
spot_img

CINE | OTTಗೆ ಎಂಟ್ರಿ ಪಡ್ಕೊಂಡ ‘ಉಸ್ತಾದ್ ಭಗತ್ ಸಿಂಗ್’: ನೆಟ್‌ಫ್ಲಿಕ್ಸ್‌ನಲ್ಲಿ ನೀವೂ ನೋಡಬಹುದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇದೀಗ OTT ಪ್ರೇಕ್ಷಕರ ಮುಂದೆ ಬಂದಿದೆ.

ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ, ಅದೇ ಸಮಯದಲ್ಲಿ ಬಂದ ‘ಧುರಂಧರ್ 2’ ಚಿತ್ರದ ಪ್ರಭಾವದಿಂದ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದಿದ್ದರೂ, ಅಭಿಮಾನಿಗಳ ಬೆಂಬಲದಿಂದ ಲಾಭದ ಗಡಿಯಲ್ಲೇ ಉಳಿದಿದೆ.

ಈಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭವಾಗಿದ್ದು, OTT ವೇದಿಕೆಯಲ್ಲಿ ಹೊಸ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿದೆ. ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಮತ್ತು ರಾಶಿ ಖನ್ನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಆರ್. ಪಾರ್ಥಿಬನ್, ಕೆ.ಎಸ್. ರವಿಕುಮಾರ್ ಹಾಗೂ ನವಾಬ್ ಶಾ ಸೇರಿದಂತೆ ಹಲವು ಕಲಾವಿದರು ಚಿತ್ರಕ್ಕೆ ಬಲ ನೀಡಿದ್ದಾರೆ.

ಇದನ್ನೂ ಓದಿ:

ನಿರ್ದೇಶಕ ಹರೀಶ್ ಶಂಕರ್ ಈ ಚಿತ್ರವನ್ನು ಪವನ್ ಅಭಿಮಾನಿಗಳಿಗಾಗಿ ವಿಶೇಷವಾಗಿ ರೂಪಿಸಿದ್ದಂತೆ ಕಾಣುತ್ತದೆ. ಪವನ್ ಅವರ ಹಳೆಯ ಹಿಟ್ ಸಿನಿಮಾಗಳ ಉಲ್ಲೇಖಗಳು, ವಿಂಟೇಜ್ ಹಾಡುಗಳ ಬಳಕೆ ಮತ್ತು ಅವರ ಸ್ಟೈಲ್‌ಗೆ ತಕ್ಕ ಮಾಸ್ ಅಂಶಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದ್ದವು.

ಚಿತ್ರದ ನಿರ್ಮಾಣ ಪ್ರಕ್ರಿಯೆಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆಂಧ್ರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಪವನ್ ಕಲ್ಯಾಣ್ ಕೆಲವು ಕಾಲ ಚಿತ್ರೀಕರಣದಿಂದ ದೂರ ಉಳಿದಿದ್ದರು. ಬಳಿಕ ಸಿನಿಮಾ ಪೂರ್ಣಗೊಂಡು ಬಿಡುಗಡೆಯಾಯಿತು.

Must Read