April 16, 2026
Thursday, April 16, 2026
spot_img

ನನ್ನ ಸಹೋದರನ ಸಾವಿಗೆ ನ್ಯಾಯ ಸಿಕ್ಕಿದೆ, ಅವರಿಗೆಲ್ಲ ಜೀವಾವಧಿ ಶಿಕ್ಷೆಯಾಗಲಿ : ಯೋಗೇಶ್‌ ಗೌಡ ಸಹೋದರಿ

ಹೊಸದಿಗಂತ ವರದಿ ಹುಬ್ಬಳ್ಳಿ:

ನನ್ನ ಸಹೋದರ (ಯೋಗೇಶಗೌಡ) ಕೊನೆಗೂ ನ್ಯಾಯ ಸಿಕ್ಕಿದೆ. ಅವನ ಹತ್ಯೆ ಮಾಡಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಯೋಗೇಶಗೌಡ ಅವರ ಸಹೋದರಿ ಅಕ್ಕಮಹಾದೇವಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಸಂಬಂಧಿಸಿ ನಮ್ಮ ತಾಯಿ, ಬಸವರಾಜ ಕೊರವರ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ. ಆತನ ಮೋಸದಿಂದ ಕೊಲೆ ಮಾಡಿದರು. ಅವಾಗಲೇ ಆತನ ಸಾವಿಗೆ ನ್ಯಾಯ ದೊರೆಯಬೇಕಿತ್ತು ಎಂದರು.

ಕೊಲೆ ಮಾಡಿಸಿದ ವ್ಯಕ್ತಿಗೆ ಅಧಿಕಾರವಿದೆ ಎಂಬ ದರ್ಪದಲ್ಲಿದ್ದ. ದೇವರು ಹಾಗೂ ಕಾನೂನು ನಮ್ಮ ಕೈ ಹಿಡಿದಿದೆ. ನ್ಯಾಯ ದೊರಕಿದ್ದು, ಸಂತಸ ತರಿಸಿದೆ. ನಮ್ಮ ಸಹೋದರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಬಸವರಾಜ ಮುತಗಿ ಆವಾಗಲೇ ಸ್ವಲ್ಪ ಮಾಹಿತಿ ನೀಡಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗ ನಮ್ಮ ಕುಟುಂಬ ನೆಮ್ಮದಿಯಿಂದ ಇರುತ್ತಿದ್ದರು. ಆದರೆ ಹಲವು ವರ್ಷಗಳ ಬಳಿಕ ನಮ್ಮ ಸಹೋದರಿನಿಗೆ ನ್ಯಾಯ ದೊರೆಕಿದೆ ಎಂದು ಹೇಳಿದರು.

ನಮಗೆ ಯಾರ ಜೀವ ಬೆದರಿಕೆ ಇಲ್ಲ. ಆದರೆ ಹಿಂದೆ ನನ್ನ ಸಹೋದರನಿಗೆ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಇತ್ತು. ಧೈರ್ಯದಿಂದ ಹೋರಾಟ ಮಾಡಿದ್ದರಿಂದ ನ್ಯಾಯ ದೊರೆಕಿದೆ. ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿದ್ದರಿಂದ ನ್ಯಾಯ ಸಿಕ್ಕಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !