ಬೇಸಿಗೆಯ ಬಿಸಿಲಿನಲ್ಲಿ ತಂಪಾದ, ಬಾಯಲ್ಲಿ ಕರಗುವ ಡೆಸರ್ಟ್ ಬೇಕೆಂದರೆ ಓರಿಯೋ ವೈಟ್ ಚಾಕೊಲೇಟ್ ಫಡ್ಜ್ ಸೂಪರ್ ಆಯ್ಕೆ. ಕೇವಲ ಕೆಲವು ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಡೆಸರ್ಟ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಫ್ರಿಜ್‌ನಲ್ಲಿ ತಣ್ಣಗಾಗಿಸಿ ಸರ್ವ್ ಮಾಡಿದರೆ ಬೇಸಿಗೆಯಲ್ಲಿ ಇನ್ನಷ್ಟು ರುಚಿ ಕೊಡುತ್ತದೆ.
ಅಗತ್ಯವಿರುವ ಪದಾರ್ಥಗಳು
ವೈಟ್ ಚಾಕೊಲೇಟ್ – 500 ಗ್ರಾಂ
ಕಂಡೆನ್ಸ್‌ಡ್ ಮಿಲ್ಕ್ – 1 ಕ್ಯಾನ್ (ಸುಮಾರು 400 ಗ್ರಾಂ)
ಓರಿಯೋ – 15 ರಿಂದ 20 (ದೊಡ್ಡದಾಗಿ ಪುಡಿ ಮಾಡಿದ್ದು)
ತಯಾರಿಸುವ ವಿಧಾನ
ಮೊದಲು ಒಂದು ಟ್ರೇಗೆ ಸ್ವಲ್ಪ ಬೆಣ್ಣೆ ಹಚ್ಚಿ ಅಥವಾ ಬೇಕಿಂಗ್ ಪೇಪರ್ ಹಾಕಿ ಇಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ ವೈಟ್ ಚಾಕೊಲೇಟ್ ಮತ್ತು ಕಂಡೆನ್ಸ್‌ಡ್ ಮಿಲ್ಕ್ ಹಾಕಿ ಕಡಿಮೆ ಉರಿಯಲ್ಲಿ ಇಡಿ. ಚಾಕೊಲೇಟ್ ಸಂಪೂರ್ಣ ಕರಗುವವರೆಗೆ ನಿಧಾನವಾಗಿ ಕೈಯಾಡಿಸುತ್ತಿರಿ. ಈ ಮಿಶ್ರಣಕ್ಕೆ ಪುಡಿ ಮಾಡಿದ ಓರಿಯೋ ಸೇರಿಸಿ ಮೆಲ್ಲಗೆ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಸಿದ್ಧಪಡಿಸಿದ ಟ್ರೇಗೆ ಸುರಿದು ಸಮವಾಗಿ ಹರಡಿ. ಮೇಲಿಂದ ಇನ್ನೂ ಸ್ವಲ್ಪ ಓರಿಯೋ ತುಂಡುಗಳನ್ನು ಉದುರಿಸಿ. ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇಡಿ. ಗಟ್ಟಿಯಾದ ನಂತರ ಹೊರತೆಗೆದು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ.
ಬೇಸಿಗೆಯಲ್ಲಿ ತಂಪಾಗಿ ಸವಿಯಲು ಈ ಫಡ್ಜ್ ನಿಜವಾಗಿಯೂ ಪರ್ಫೆಕ್ಟ್ ಡೆಸರ್ಟ್!



