April 19, 2026
Sunday, April 19, 2026
spot_img

Fact | ನಾನು.. ನನ್ನದು.. ನನಗೇ! ಈ ಗುಣಗಳಿರುವವರಿಂದ ಈಗಲೇ ಅಂತರ ಕಾಯ್ದುಕೊಳ್ಳಿ

ನಮ್ಮ ಜೀವನದಲ್ಲಿ ನಮಗೆ ಹತ್ತಿರವಿರುವ ಎಲ್ಲರೂ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಅಗತ್ಯಕ್ಕಾಗಿ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ. ಅಂತಹ ‘ಸ್ವಾರ್ಥಿ’ ಜನರನ್ನು ಗುರುತಿಸುವುದು ಹೇಗೆ?

ಸ್ವಾರ್ಥಿಗಳು ಸದಾ ತಮಗೆ ಏನು ಸಿಗುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸುತ್ತಾರೆ. ಯಾವುದೇ ಕೆಲಸ ಮಾಡುವ ಮೊದಲು “ಇದರಿಂದ ನನಗೇನು ಲಾಭ?” ಎನ್ನುವ ಮನಸ್ಥಿತಿ ಇವರಲ್ಲಿ ಹೆಚ್ಚಿರುತ್ತದೆ.

ನೀವು ಅವರಿಗೆ ಎಷ್ಟೇ ಸಹಾಯ ಮಾಡಿದರೂ, ಅವರು ಅದನ್ನು ತಮ್ಮ ಹಕ್ಕು ಎಂಬಂತೆ ಭಾವಿಸುತ್ತಾರೆ. ಸಹಾಯ ಪಡೆದ ಮೇಲೆ ಕನಿಷ್ಠ “ಧನ್ಯವಾದ” ಹೇಳುವ ಗುಣವೂ ಇವರಲ್ಲಿ ಇರುವುದಿಲ್ಲ.

ಯಾವುದೇ ಸಂಭಾಷಣೆ ನಡೆಯಲಿ, ಅದನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವ ಕಲೆ ಇವರಿಗೆ ಗೊತ್ತು. ಇತರರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಇವರಿಗಿರುವುದಿಲ್ಲ.

ನಿಮಗೆ ಸಹಾಯ ಬೇಕಾದಾಗ ಇವರು ನೂರಾರು ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಾರೆ. ಆದರೆ ಅವರಿಗೆ ಕೆಲಸವಿದ್ದಾಗ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತಾರೆ.

ಸ್ವಾರ್ಥಿ ಜನರಿಗೆ ತಾವು ತಪ್ಪು ಮಾಡುತ್ತಿದ್ದೇವೆ ಎಂಬ ಅರಿವಿದ್ದರೂ, ಅದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಾರೆ.

ತಮ್ಮ ಕೆಲಸ ಆಗಬೇಕು ಎಂದರೆ ಇವರು ಭಾವನೆಗಳನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಎದುರಿಗಿರುವ ವ್ಯಕ್ತಿಯನ್ನು ಅತಂತ್ರ ಸ್ಥಿತಿಗೆ ತಳ್ಳಿ ಕೆಲಸ ಸಾಧಿಸಿಕೊಳ್ಳುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !