April 19, 2026
Sunday, April 19, 2026
spot_img

ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಅಲ್ಲು ಅರ್ಜುನ್: ಕಾರಣವೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ನಟ ಅಲ್ಲು ಅರ್ಜುನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗೆ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಹೆಸರು, ಧ್ವನಿ, ಫೋಟೋಗಳು AI ಬಳಸಿ ದುರ್ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು , ತೆಲಂಗಾಣ ಮೂಲದವರಾದ ಅಲ್ಲು ಅರ್ಜುನ್ ಅವರು ದೆಹಲಿ ಕೋರ್ಟ್‌ಗೆ ಬರಲು ಕಾರಣ ಏನೆಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಅಲ್ಲು ಪರ ವಕೀಲರು, ದೇಶಾದ್ಯಂತ ನಟನ ಗುರುತಿನ ದುರ್ಬಳಕೆ ನಡೆಯುತ್ತಿದ್ದು, ಈ ಕಾರಣ ದೆಹಲಿ ಹೈಕೋರ್ಟ್‌ಗೆ ಪ್ರಕರಣದ ವಿಚಾರಣೆ ನಡೆಸುವ ಅವಕಾಶವಿದೆ ಎಂದು ವಾದಿಸಿದರು.

ತಂತ್ರಜ್ಞಾನದ ಮೂಲಕ ಅಪ್ಲಿಕೇಶನ್ ತಯಾರಿಸಿ ದುರ್ಬಳಕೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ ಅಲ್ಲು ಅರ್ಜುನ್ ತಮ್ಮ ವ್ಯಕ್ತಿತ್ವ ರಕ್ಷಣೆಗಾಗಿ ಈಗಾಗಲೇ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !