June 14, 2026
Sunday, June 14, 2026
spot_img

ನಮ್ಮ ರೈಲ್ವೆ ಅಭಿವೃದ್ಧಿ ಕಂಡಿದೆ…ವಂದೇ ಭಾರತ್ ಎಕ್ಸ್‌ಪ್ರೆಸ್‌ ನಲ್ಲಿ ಪ್ರಯಾಣಿಸಿ ಖುಷಿಹಂಚಿಕೊಂಡ ನಟ ಸೋನು ಸೂದ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿನ ಪ್ರಯಾಣದ ಅನುಭವವನ್ನು ಬಾಲಿವುಡ್ ನಟ ಸೋನು ಸೂದ್ ಅವರು ಹಂಚಿಕೊಂಡಿದ್ದು, ಹಲವು ವರ್ಷಗಳಲ್ಲಿ ಭಾರತೀಯ ರೈಲ್ವೆ ಯಾವ ರೀತಿ ಅಭಿವೃದ್ಧಿ ಕಂಡಿದೆ ಎಂದು ಹೇಳಿಕೊಂಡರು.

ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಸೂದ್, ಮುಂಬೈನಲ್ಲಿ ನಟನಾಗಿ ಜೀವನ ಆರಂಭಿಸುವ ಮುನ್ನ ಕಳೆದ ದಿನಗಳಲ್ಲಿ ರೈಲು ಪ್ರಯಾಣದ ದಿನಗಳನ್ನು ನೆನಪಿಸಿಕೊಂಡರು.

ಹೊಸತನದಿಂದ ಕೂಡಿದ ಪ್ರಯಾಣ

ಇಂದು ಬಹಳ ಖುಷಿಯಿಂದ ನಾವು ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸುತ್ತಿದ್ದೇವೆ. ಅನೇಕ ಬದಲಾವಣೆ ಜೊತೆಗೆ ಹಲವು ವಿಚಾರಗಳಲ್ಲಿ ಹೊಸತನದಿಂದ ಕೂಡಿದೆ. ಇಂದು ರೈಲಿನ ಗುಣಮಟ್ಟ, ಆಹಾರ, ಸಿಬ್ಬಂದಿಗಳು, ಅವರು ನೀಡುವ ಪ್ರೀತಿ ಎಲ್ಲವೂ ಹೊಸತನದಿಂದ ಕೂಡಿದೆ.

ಅಂದು ಕಾಗದಗಳ ಮೇಲೆ ಮಲಗಿ ಪ್ರಯಾಣ

ಆದರೆ ಜೀವನದ ಆರಂಭದ ದಿನಗಳಲ್ಲಿ ನಾನು ನಾಗ್ಪುರದಲ್ಲಿ ಅಧ್ಯಯನ ಮಾಡಿದೆ ಮತ್ತು ನಂತರ ನಟನಾಗಲು ಮುಂಬೈಗೆ ಹೊರಟೆ. ಆ ಸಮಯದಲ್ಲಿ ಉದ್ದವಾದ ಕಂಪ್ಯೂಟರ್ ಕಾಗದಗಳನ್ನು ನೆಲದ ಮೇಲೆ ಹರಡಿ ರಾತ್ರಿಯಲ್ಲಿ ಮಲಗಿ ಸಮಯ ಕಳೆಯುತ್ತಿದ್ದೆವು. ಆದರೆ, ಇಂದು ಮತ್ತೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ, ಭಾರತೀಯ ರೈಲ್ವೆ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ನಾನು ಹೇಳಬಲ್ಲೆ ಎಂದು ಅವರು ಹೇಳಿದರು.

ಈ ಬದಲಾವಣೆಯಿಂದ ತಿಳಿಯುತ್ತದೆ ಯಾವ ರೀತಿ ಅದ್ಭುತ ಕೆಲಸಗಳು ನಡೆಯುತ್ತಿದೆ. ಅದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ದೇಶದ ಅಭಿವೃದ್ಧಿಗೆ ಇದೆಲ್ಲವೂ ಬಹಳ ಮುಖ್ಯ. ಶುಭವಾಗಲಿ ಎಂದು ಸೋನು ಸಂತಸ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !