July 5, 2026
Sunday, July 5, 2026
spot_img

BBK13 ಆಡಿಷನ್ ಬಿಗ್ ಅಪ್ಡೇಟ್: ಎದ್ದೂ ಬಿದ್ದು ವಿಡಿಯೋ ಕಳಿಸೋ ಮುನ್ನ ಬಿಗ್‌ಬಾಸ್‌ನ ಈ ಹೊಸ ನಿಯಮ ತಿಳ್ಕೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನ ಜನಸಾಮಾನ್ಯರ ಆಡಿಷನ್ ಪ್ರಕ್ರಿಯೆ ಕುರಿತು ಕಲರ್ಸ್ ಕನ್ನಡ ವಾಹಿನಿಯು ಮಹತ್ವದ ಬಿಗ್ ಅಪ್ಡೇಟ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎದ್ದೂ ಬಿದ್ದು ಆಡಿಷನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಟ್ಯಾಗ್ ಮಾಡುತ್ತಿರುವವರಿಗೆ ವಾಹಿನಿಯು ಕಟ್ಟುನಿಟ್ಟಿನ ನಿಯಮ ಮತ್ತು ಸರಿಯಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸೋಶಿಯಲ್ ಮೀಡಿಯಾ ಟ್ಯಾಗ್ ಮಾಡಿದರೆ ನಡೆಯಲ್ಲ!

ಅನೇಕ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳು ಹಾಗೂ ಸಾರ್ವಜನಿಕರು ತಾವು ಮಾಡಿದ ಆಡಿಷನ್ ವಿಡಿಯೋಗಳನ್ನು ಕೇವಲ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿ ಕಲರ್ಸ್ ಕನ್ನಡ ವಾಹಿನಿಯನ್ನು ಟ್ಯಾಗ್ ಮಾಡುತ್ತಿದ್ದಾರೆ. ಆದರೆ, ಕೇವಲ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಪರಿಗಣಿಸಿ ಯಾರನ್ನೂ ಆಯ್ಕೆ ಮಾಡುವುದಿಲ್ಲ ಎಂದು ಬಿಗ್ ಬಾಸ್ ಸ್ಪಷ್ಟಪಡಿಸಿದೆ.

ಏಕೈಕ ಅಧಿಕೃತ ನೋಂದಣಿ ಲಿಂಕ್

ಆಡಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸುವವರು ಕಡ್ಡಾಯವಾಗಿ ಜಿಯೋಸ್ಟಾರ್‌ನ ಅಧಿಕೃತ ಮೈಕ್ರೋಸೈಟ್ ವೆಬ್‌ಸೈಟ್ ಆದ colorskannada.jiostar.com ಮೂಲಕವೇ ತಮ್ಮ ವಿಡಿಯೋ ಮತ್ತು ವಿವರಗಳನ್ನು ಸಲ್ಲಿಸಬೇಕು. ಇದು ಮಾತ್ರವೇ ನಿಮ್ಮ ಅಪ್ಲಿಕೇಶನ್ ನೇರವಾಗಿ ಆಯ್ಕೆ ಸಮಿತಿಯ ಕೈ ಸೇರಲು ಇರುವ ಏಕೈಕ ಅಧಿಕೃತ ಮಾರ್ಗವಾಗಿದೆ.

ಇದನ್ನೂ ಓದಿ:

ವಿಡಿಯೋ ನಿಯಮಗಳು ಮತ್ತು ಸೈಜ್ ಲಿಮಿಟ್

ನೀವು ಅಪ್‌ಲೋಡ್ ಮಾಡುವ ಆಡಿಷನ್ ವಿಡಿಯೋ ಗರಿಷ್ಠ 3 ನಿಮಿಷಗಳ ಅವಧಿಯದ್ದಾಗಿರಬೇಕು. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ವಿಳಾಸದೊಂದಿಗೆ ನೀವು ಯಾಕೆ ಬಿಗ್ ಬಾಸ್‌ಗೆ ಅರ್ಹರು ಎಂಬುದನ್ನು ವಿವರಿಸಬೇಕು. ಅಪ್‌ಲೋಡ್ ಮಾಡುವ ವಿಡಿಯೋ ಫೈಲ್‌ನ ಗಾತ್ರ 50 MB ಗಿಂತ ಹೆಚ್ಚಿರಬಾರದು.

ಒಟಿಪಿ ಬಾರದಿದ್ದರೆ ಏನು ಮಾಡಬೇಕು?

ವೆಬ್‌ಸೈಟ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದಾಗ ಒಂದು ವೇಳೆ ನಿಮಗೆ ಒಟಿಪಿ ಬರದೇ ಇದ್ದಲ್ಲಿ, ನಿಮ್ಮ ಮೊಬೈಲ್‌ನಲ್ಲಿ DND (Do Not Disturb) ಮೋಡ್ ಆಕ್ಟಿವೇಟ್ ಆಗಿರುವ ಸಾಧ್ಯತೆ ಇರುತ್ತದೆ. ತಕ್ಷಣವೇ ನಿಮ್ಮ ಮೊಬೈಲ್ ಆಪರೇಟರ್ ಸಂಪರ್ಕಿಸಿ ಡಿಎನ್‌ಡಿ ನಿಷ್ಕ್ರಿಯಗೊಳಿಸಿ ಆಡಿಷನ್ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !