October 11, 2026
Sunday, October 11, 2026
spot_img

UPI ಪಾವತಿಗೆ ಹೊಸ ರೂಲ್ಸ್: ಇನ್ಮುಂದೆ 10,000 ರೂ ಮೇಲ್ಪಟ್ಟ ವರ್ಗಾವಣೆಗೆ 1 ಗಂಟೆ ಬೇಕು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಜಿಟಲ್ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000ಕ್ಕಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವ ವೇಳೆ ಹಣ ತಕ್ಷಣವೇ ಜಮೆಯಾಗದೇ, ಒಂದು ಗಂಟೆ ಬಳಿಕ ಪ್ರಕ್ರಿಯೆಯಾಗುವ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ.

ಹೊಸ ಪ್ರಸ್ತಾವನೆಯ ಪ್ರಕಾರ, ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಿದಾಗ ಆ ಹಣವನ್ನು ಬ್ಯಾಂಕ್ ತಾತ್ಕಾಲಿಕವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಒಂದು ಗಂಟೆಯ ನಂತರ ಮಾತ್ರ ಅದು ಸ್ವೀಕರಿಸುವವರ ಖಾತೆಗೆ ಜಮೆಯಾಗುತ್ತದೆ. ಈ ಮಧ್ಯದಲ್ಲಿ ಗ್ರಾಹಕರಿಗೆ ತಪ್ಪಾಗಿ ನಡೆದ ವರ್ಗಾವಣೆಯನ್ನು ರದ್ದುಪಡಿಸಲು ಅವಕಾಶವೂ ಸಿಗಲಿದೆ.

ಇದನ್ನೂ ಓದಿ:

ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮವನ್ನು ಪರಿಗಣಿಸಲಾಗಿದೆ. ಕಳೆದ ವರ್ಷ ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಆನ್‌ಲೈನ್ ಮೋಸ ಪ್ರಕರಣಗಳು ದಾಖಲಾಗಿದ್ದು, ವಿಶೇಷವಾಗಿ ದೊಡ್ಡ ಮೊತ್ತದ ವರ್ಗಾವಣೆಯಲ್ಲಿ ತಪ್ಪುಗಳು ಹಾಗೂ ವಂಚನೆಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ.

ಆದರೆ ಈ ನಿಯಮವು ಪ್ರತಿದಿನದ ಸಣ್ಣ ಪಾವತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂಗಡಿಗಳ ಖರೀದಿ, ಇಎಂಐ ಪಾವತಿ, ಮ್ಯೂಚುವಲ್ ಫಂಡ್ ಎಸ್‌ಐಪಿ, ವಿಮಾ ಪ್ರೀಮಿಯಂ ಮತ್ತು ಸಬ್‌ಸ್ಕ್ರಿಪ್ಷನ್ ಪಾವತಿಗಳು ಹಳೆಯ ರೀತಿಯಲ್ಲೇ ಮುಂದುವರಿಯಲಿವೆ. ಬಳಕೆದಾರರು ನಂಬಿಕೆಯ ವ್ಯಕ್ತಿಗಳನ್ನು ಪಟ್ಟಿ ಮಾಡಿಕೊಳ್ಳುವ ಮೂಲಕ ನಿರ್ವಿಘ್ನವಾಗಿ ಹಣ ವರ್ಗಾವಣೆ ಮಾಡುವ ಅವಕಾಶವೂ ಇರುತ್ತದೆ.

Must Read